ತುಳುನಾಡಿನ ಐತಿಹಾಸಿಕ ರಾಜಧಾನಿ ಬಾರ್ಕೂರಿಗೆ ಸಚಿವರ ಮಹತ್ವದ ಭೇಟಿ

0
7

ತುಳುನಾಡ ರಾಜಧಾನಿ ಐತಿಹಾಸಿಕ ಬಾರ್ಕೂರಿಗೆ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಹಾಗೂ ಉಡುಪಿ ಜಿಲ್ಲಾಉಸ್ತುವಾರಿ ಸಚಿವರಾದ ರಿಜ್ವಾನ್ ಅರ್ಷದ್ ಅವರ ಮಹತ್ವದ ಭೇಟಿ

ಸಮಗ್ರ ಜೀವಣೋದ್ಧಾರಗೊಳ್ಳಲಿರುವ ಮಹತೋಬಾರ ಬಾರ್ಕೂರು ಕೋಟೆ ಕೇರಿ ಶ್ರೀ ಪಂಚಲಿಂಗೇಶ್ವರಕ್ಕೆ ಭೇಟಿ ನೀಡಿದ ಕರ್ನಾಟಕ ಸರ್ಕಾರದ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ರಿಜ್ವಾನ್ ಅರ್ಷದ್ ಅವರನ್ನು ಆದರ ರ್ಪೂರ್ವಕವಾಗಿ ಬರಮಾಡಿಕೊಂಡು ಈ ದೇವರ ಅನುಗ್ರಹ ಪ್ರಸಾದ ನೀಡಿ ಗೌರವಿಸಲಾಯಿತು ಇದೇ ಸಂದರ್ಭದಲ್ಲಿ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಗಳು ಹಾಗೂ ಸಮಗ್ರ ಬಾರ್ಕೂರು ಅಭಿವೃದ್ಧಿಯ ಮಾಹಿತಿ ನೀಡಿ ಮನವಿ ಸಲ್ಲಿಸಲಾಯಿತು.

ಮಾಧ್ಯಮದವರೊಂದಿಗೆ ಮಾತನಾಡಿದ ಮಾನ್ಯ ಸಚಿವರು ಭಾರತ ದೇಶ ಸರ್ವಧರ್ಮ ಸಮನ್ವತೆಯ ನಾಡು ಎನ್ನುವುದನ್ನು ಭಾರ್ಕೂರಿನಲ್ಲಿ ಕಾಣಬಹುದಾಗಿದೆ ಇದು ದೇಶಕ್ಕೆ ಮಾದರಿ ಮುಂದಿನ ದಿನಗಳಲ್ಲಿ ಬಾರ್ಕೂರು ಪ್ರವಾಸಿ ಕೇಂದ್ರವಾಗಿ ಮತ್ತು ಧಾರ್ಮಿಕ ಕೇಂದ್ರವಾಗಿ ಮಾಡುವ ಎಲ್ಲ ಯೋಜನೆಗೆ ನನ್ನ ಸಹಕಾರ ಇದೆ ಎಂದರು

ಈ ಸಂದರ್ಭದಲ್ಲಿ ಕರ್ನಾಟಕ ಕರಾವಳಿ ಪ್ರಾಧಿಕಾರದ ಅಧ್ಯಕ್ಷರಾದ ಎಂ ಎ ಗಪೂರ್, ದೇವಳದ ಜೀರ್ಣೋದ್ದಾರ ಸಮಿತಿ ಅಧ್ಯಕ್ಷರಾದ ಸುಗ್ಗಿ ಸುಧಾಕರ್ ಶೆಟ್ಟಿ,ಕಾರ್ಯಾಧ್ಯಕ್ಷರಾದ ಬಿ ಶಾಂತರಾಮ ಶೆಟ್ಟಿ, ಜೀರ್ಣೋದ್ಧಾರ ಸಮಿತಿಯ ಉಪಾಧ್ಯಕ್ಷರಾದ ಚಂದ್ರಶೇಖರ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್ ಶೆಟ್ಟಿ, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ದಿನಕರ್ ಹೇರೂರು, ಉಡುಪಿ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷರಾದ ಶ್ರೀ ಭುಜಂಗ ಶೆಟ್ಟಿ, ಇತಿಹಾಸ ತಜ್ಞರಾದ ಜಗದೀಶ್ ಶೆಟ್ಟಿ, *ಬಾರ್ಕೂರು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ಮಹೇಶ್ ಕೆ, ರಾಜೇಶ್ ಶೆಟ್ಟಿ ಕೆ, ಉದಯ್ ಕುಮಾರ್ ಶೆಟ್ಟಿ,ಬಿ ರಾಮಚಂದ್ರ ಕಾಮತ್, ಜನಾರ್ದನ್ ದೇವಾಡಿಗ ನರಸಿಂಹ ದೇವಾಡಿಗ,ಶ್ರೀ ಕೃಷ್ಣ, ಮಧುಸೂದನ್ ಕಚ್ಚೂರು, ಮಂಜುನಾಥ ಪೂಜಾರಿ, ರತ್ನಾಕರ ಶೆಟ್ಟಿ,ಮಲ್ಲಿಕಾ ಹೆಗ್ಡೆ, ಉಮಾ ಕೆ, ಗೌರಿ ವಿ ಪೂಜಾರಿ, ಆಶಾ ವ್ಯವಸ್ಥಾಪನಾ ಮಂಡಳಿಯ ಸದಸ್ಯರು, ಜೀರ್ಣೋದ್ದಾರ ಸಮಿತಿಯ ಸದಸ್ಯರು ಸೇರಿದಂತೆ ಅನೇಕ ರಾಜಕೀಯ ಗಣ್ಯರು, ಮಾಧ್ಯಮ ಮಿತ್ರರು,ಭಕ್ತಾದಿಗಳು ಉಪಸ್ಥಿತರಿದ್ದರು