ಮೂಡು ಬಿದಿರೆ ಜೈನಕಾಶಿ ಸ್ವಸ್ತಿಶ್ರೀ ಜೈನ ವಸತಿ ಪದವಿ ಪೂರ್ವ ಕಾಲೇಜಿನಲ್ಲಿ 80 ನೇ ವರ್ಷ ದ ಸ್ವಾತಂತ್ರ್ಯ ದಿನಾಚರಣೆ

0
42

ಕಾಲೇಜು ಪ್ರಾoಗಣ ದಲ್ಲಿ ಸ್ವತಂತ್ರ್ಯ ದಿನಾಚರಣೆಯನ್ನು ಆಚರಿಸ ಲಾಯಿತು. ಕಾಲೇಜಿನ ಸ್ಥಾಪಕ ಅಧ್ಯಕ್ಷರಾದ ಡಾ. ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿ ಪಾವನ ಸಾನಿಧ್ಯ ಹಾಗೂ ಅಧ್ಯಕ್ಷತೆ ವಹಿಸಿ ಆಶೀರ್ವಾದ ನೀಡಿ ಯುವ ಜನತೆ ಸ್ವಾತoತ್ರದ ಮಹತ್ವ ಅರಿತು ದೇಶದ ಸಮಸ್ಯೆ ಯನ್ನು ಅರಿತು ನಮ್ಮ ದೇಶದ ಆದರ್ಶ ಸಂಸ್ಕೃತಿ ಮೈಗೂಡಿಸಿ ದ್ವೇಷ ಅಸೂಯೆ ಗೆ ಅವಕಾಶ ನೀಡದೆ ಜಗತ್ತಿನಲ್ಲಿ ಶಾಂತಿ ನೆಲೆ ಯಾಗಲು ಉತ್ತಮ ಶಿಕ್ಷಣ ಮುಖ್ಯ.
ಭೌತಿಕ ಶಿಕ್ಷಣ ದೊಂದಿಗೆ ನೈತಿಕ ಶಿಕ್ಷಣ ದ ಮಹತ್ವ ಅರಿತು ಸ್ವಚ್ಚ ಸುಂದರ ಭಾರತ ಕಟ್ಟಲು ಪ್ರತಿಯೊಬ್ಬರು ನೆರವಾಗಬೇಕು ಎಂದರು. ಬೆಳಿಗ್ಗೆ 9.30ಕ್ಕೆ ರಂಜನ್ ಪೂವಣಿ ನೋಟರಿ ಹಾಗೂ ವಕೀಲರು ಧ್ವಜಾರೋಹಣ ವನ್ನು ನೆರವೇರಿಸಿದರು.

ದೇಶ ಭಕ್ತಿ ಗೀತೆ ಹಾಡಿ ಧ್ವಜ ವಂದನೆಸಲ್ಲಿಸಿ ಬಳಿಕ ಸಭೆ ನೆರವೇರಿತು . ಡಾ ಎಸ್. ಪಿ ವಿದ್ಯಾಕುಮಾರ್ ನಿವ್ರತ್ತ ಪ್ರಾಧ್ಯಪಕರು ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಕಾಲೇಜು ಸ್ಥಾಪಕ ಪ್ರಾಂಶುಪಾಲ ಪಾಣೇರುಅನಂತರಾಜ್ ಇಂದ್ರ ಸ್ಮರಣಾ ರ್ಥ ಅವರ ಪತ್ನಿ ವಿಜಯಕುಮಾರಿ ಇಂದ್ರ ಮತ್ತು ಮಕ್ಕಳು ಇವರು ನೀಡಿದ ವಿದ್ಯಾರ್ಥಿ ವೇತನ ಮೊತ್ತವನ್ನು ವಿದ್ಯಾರ್ಥಿಗಳಿಗೆ ಸ್ವಾಮೀಜಿ ವಿತರಿಸಿ ದರು ಪ್ರಾಂಶುಪಾಲೆ ಸೌಮ್ಯಶ್ರೀ ಸ್ವಾಗತಿಸಿದರು. ಸುಜಾತಾ ಬಲ್ಲಾಳ್ ಧನ್ಯವಾದವಿತ್ತರು. ವಿದ್ಯಾರ್ಥಿನಿ ದೀಕ್ಷಾ ಕಾರ್ಯಕ್ರಮ ನಿರೂಪಿದರು.