ಕೊಪ್ಪ: ಕೊಪ್ಪದ ಮೊರಾರ್ಜಿ ಶಾಲೆಯ 14 ವರ್ಷದ 9 ನೇ ತರಗತಿ ವಿದ್ಯಾರ್ಥಿನಿ ಶಮಿತಾ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಇವರು ಮೂಲತಃ ಬೊಮ್ಲಾಪುರದ ಸಮೀಪದ ಹೊಕ್ಕಳಿಕೆಯವರು. ಕೊಪ್ಪದ ಮೊರಾರ್ಜಿ ಹಾಸ್ಟೆಲ್‌ನ ಬಾತ್ ರೂಮ್ ನಲ್ಲಿ ಚೂಡಿದಾರ ವೇಲ್ ಬಿಗಿದುಕೊಂಡುನೇಣಿಗೆ ಶರಣಾಗಿದ್ದಾಳೆ. ಮುರಾರ್ಜಿ ಶಾಲೆಯ ವ್ಯವಸ್ಥೆ ಬಗ್ಗೆ ಪೋಷಕರು ಹಾಗೂ ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ. ಸೂಕ್ತ ತನಿಖೆಯ ಅಗತ್ಯವಿದ್ದು, ಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.