ಕಾಂತಾವರ : ಯುವ ಸಂಗಮ ಕಾಂತಾವರ (ರಿ) ಹಾಗೂ ಯುವ ಉತ್ಸಾಹಿ ಬಳಗ (ರಿ) ಕೇಮಾರು ಇವರ ಜಂಟಿ ಆಶ್ರಯದಲ್ಲಿ 3ನೇ ವರ್ಷದ ಕೆಸರ್ಡ್ ಒಂಜಿ ದಿನ ಕಾರ್ಯಕ್ರಮವು ಜು.6ರಂದು ಆದಿತ್ಯವಾರ ಕಾಂತಾವರ ಕುಂದಿಲ, ಕಡತ್ರಬೈಲು ನೆರೋಲ್ದ ಬಾಕಿಮಾರು ಗದ್ದೆಯಲ್ಲಿ ಜರುಗಲಿದೆ.
ಬೆಳಿಗ್ಗೆ 9.00 ಕ್ಕೆ ಸರಿಯಾಗಿ ಯುವಸಂಗಮ ಕಾಂತಾವರದ ಅಧ್ಯಕ್ಷ ನವೀನ್ ಜೆ ಕೆ ಇವರ ಅಧ್ಯಕ್ಷತೆಯಲ್ಲಿ , ಶ್ರೀ ಕ್ಷೇತ್ರ ಕಾಂತಾವರ ಪ್ರಧಾನ ಅರ್ಚಕರಾದ ಕೃಷ್ಣಮೂರ್ತಿ ಭಟ್ ಇವರು ಮುಖ್ಯ ಅತಿಥಿ ಗಣ್ಯರ ಉಪಸ್ಥಿತಿಯಲ್ಲಿ ಉದ್ಘಾಟನಾ ಸಮಾರಂಭ ನಡೆಯಲಿದೆ.
ಪುರುಷರಿಗೆ ವಾಲಿಬಾಲ್ , ಹಗ್ಗಜಗ್ಗಾಟ , ವೈಯಕ್ತಿಕ ಆಟಗಳು, ಮಹಿಳೆಯರಿಗೆ ತ್ರೋಬಾಲ್, ಹಗ್ಗಜಗ್ಗಾಟ, ವೈಯಕ್ತಿಕ ಆಟಗಳು, ಮಕ್ಕಳಿಗೆ ವೈಯಕ್ತಿಕ ಆಟಗಳು, ಸಾರ್ವಜನಿಕರಿಗೆ ನಿಧಿ ಶೋಧ , ವಿಶೇಷ ಆಕರ್ಷಣೆಯಾಗಿ ಚೆನ್ನೆಮಣೆ ಆಟ ಹಾಗೂ ವಿಡಿಯೋ ರೀಲ್ಸ್ ಸ್ಪರ್ಧೆ ನಡೆಯಲಿರುವುದು.
ಮಧ್ಯಾಹ್ನ 12.30ಕ್ಕೆ ಸರಿಯಾಗಿ ಶ್ರೀ ಕ್ಷೇತ್ರ ಕಾಂತಾವರ ಧರ್ಮದರ್ಶಿಗಳು ಡಾ.ಕೆ ಜೀವಂಧರ್ ಬಲ್ಲಾಳ್ ಇವರ ಅಧ್ಯಕ್ಷತೆಯಲ್ಲಿ, ಶ್ರೀ ಕ್ಷೇತ್ರ ಕೇಮಾರು ಶ್ರೀ ಶ್ರೀ ಈಶ ವಿಠಲ ದಾಸ ಸ್ವಾಮೀಜಿಯವರ ಆಶೀರ್ವಚನದೊಂದಿಗೆ, ಅತಿಥಿ ಗಣ್ಯರ ಉಪಸ್ಥಿತಿಯಲ್ಲಿ ದೈವಾರಾಧನೆ ಕ್ಷೇತ್ರದಿಂದ ವಸಂತ ಪೂಜಾರಿ ಪೈಬೆಟ್ಟು ಹಾಗೂ ಆನಂದ ಪೂಜಾರಿ ಕೇಮಾರು ಇವರನ್ನು ಸನ್ಮಾನಿಸಲಾಗುವುದು.
ಈ ಕಾರ್ಯಕ್ರಮದಲ್ಲಿ ಅವಿಭಜಿತ ಉಡುಪಿ ದಕ್ಷಿಣ ಕನ್ನಡ ಜಿಲ್ಲೆಯ ಜನಪ್ರತಿನಿಧಿಗಳು ಸೇರಿದಂತೆ ವಿವಿಧ ಕ್ಷೇತ್ರದ ಗುರುತಿಸಿಕೊಂಡಿರುವ ಗಣ್ಯರು ಭಾಗವಹಿಸಲಿದ್ದಾರೆ.
ಸಮಾರೋಪ ಸಮಾರಂಭವು ಸಂಜೆ 4.30 ಕ್ಕೆ ಸರಿಯಾಗಿ ಯುವ ಉತ್ಸಾಹಿ ಬಳಗದ ಅಧ್ಯಕ್ಷ ಚಂದ್ರಹಾಸ ಜೈನ್ ಹಕ್ಕೇರಿ ಇವರ ಅಧ್ಯಕ್ಷತೆಯಲ್ಲಿ, ಹಾಗೂ ಮುಖ್ಯ ಅತಿಥಿಗಳ ಉಪಸ್ಥಿತಿಯಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ. ಎಂದು ಕಾರ್ಯಕ್ರಮದ ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.