ಮೂಡುಬಿದಿರೆ ಬಿಲ್ಲವ ಸಂಘದಲ್ಲಿ ಬಿರುವೆರ್ ಕೂಡುಕಟ್ಟ್ ಕಾರ್ಯಕ್ರಮ

0
448

ಮೂಡುಬಿದಿರೆ: ಕೂಡುಕಟ್ಟು ವಿಚಾರಗಳು ನಿಯಮಬದ್ಧ ಆಚಾರಗಳ ಚೌಕಟ್ಟಿನಿಂದ ಹೊರಗೆ ಬಂದು, ದಾರಿಯಲ್ಲಿ ಮೆರವಣಿಗೆಯಲ್ಲಿ‌ ಪ್ರದರ್ಶನವಾದಾಗ ಅದು ಸೋಲುತ್ತದೆ. ದ.ಕ ಜಿಲ್ಲೆಯಲ್ಲಿ ಬಿಲ್ಲವರಿಗೆ ಇದ್ದಂತಹ ಕೂಡುಕಟ್ಟು ಬೇರೆ ಎಲ್ಲೂ ಇರಲಿಲ್ಲ. ಯಾವ ವ್ಯಕ್ತಿಗೆ ತನ್ನ ಪರಂಪರೆಯ, ಹಿರಿಯರ ಚರಿತ್ರೆ ಗೊತ್ತಿರುತ್ತದೋ ಆ ವ್ಯಕ್ತಿ ದಾರಿ ತಪ್ಪುವುದಿಲ್ಲ ಎಂದು ತುಳು ವಿದ್ವಾಂಸ ಡಾ.ಗಣೇಶ್ ಅಮೀನ್ ಸಂಕಮಾರ್ ಹೇಳಿದರು.
ಬ್ರಹ್ಮಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ ಮೂಡುಬಿದಿರೆ, ಶ್ರೀ ನಾರಾಯಣಗುರಿ ಸೇವಾದಳ ಮತ್ತು ಶ್ರೀ ನಾರಾಯಣಗುರು ಮಹಿಳಾ ಘಟಕದ ವತಿಯಿಂದ ಅಮೃತ ಮಹೋತ್ಸವ ಸಂಭ್ರಮ 2025 ಪ್ರಯುಕ್ತ ಸಂಘದ ಅಮೃತ ಸಭಾಭವನದಲ್ಲಿ ಭಾನುವಾರ ನಡೆದ 6ನೇ ಮಾಸಿಕ ಕಾರ್ಯಕ್ರಮ ‘ ಬಿರುವೆರ್ ಕೂಡುಕಟ್ಟ್’ ಮದಿಪು-ತುಲಿಪು ಸಂವಾದದಲ್ಲಿ ಮಾತನಾಡಿದರು.


ಸಂಘದ ಅಧ್ಯಕ್ಷ ಸುರೇಶ್ ಕೆ.ಪೂಜಾರಿ ಅಧ್ಯಕ್ಷತೆವಹಿಸಿದರು. ಕಳೆದ 74 ವರ್ಷಗಳ ಇತಿಹಾಸವನ್ನು ಹೊಂದಿರುವ ನಮ್ಮ ಸಂಘ ನಿರಂತರ ಸಮಾಜಿಕಮುಖಿ ಕೆಲಸವನ್ನು ಮಾಡುತ್ತಾ ಬಂದಿದೆ. ಬಿಲ್ಲವ ಸಮುದಾಯ ಪರಂಪರೆ, ಆಚಾರ ವಿಚಾರಗಳನ್ನು ಮುಂದಿನ ಪೀಳಿಗೆಗೆ ಅರ್ಥಪೂರ್ಣವಾಗಿ ನೀಡಬೇಕು ಎನ್ನುವ ಉದ್ದೇಶದಿಂದ ಪ್ರತಿ‌ ತಿಂಗಳು ಕಾರ್ಯಕ್ರಮವನ್ನು ಆಯೋಜಿಸುತ್ತಿದ್ದೇವೆ ಎಂದರು.
ಅಮೃತ ಮಹೋತ್ಸವ ಸಮಿತಿ ಪ್ರಧಾನ ಸಂಚಾಲಕ ರಾಘು ಸಿ. ಪೂಜಾರಿ ಮಾರ್ನಾಡ್‌ ಕಾರ್ಯಕ್ರಮ ಉದ್ಘಾಟಿಸಿದರು.


ಕರ್ನಾಟಕ ಬ್ಯಾಂಕ್ ನಿವೃತ್ತ ಪ್ರಬಂಧಕರು ಸೀತಪ್ಪ ಕೂಡೂರು, ಶಿಕ್ಷಕಿ,‌ ಲೇಖಕಿ ವಿಜಯಲಕ್ಣ್ಮೀ ಕಟೀಲು, ಉಪನ್ಯಾಸಕ ಕೇಶವ ಬಂಗೇರ, ಪಡುಕೊಣಾಜೆ ಗುಡ್ಯಾರುಮನೆ ಗಡಿಕಾರ ವೀರಪ್ಪ ಕೋಟ್ಯಾನ್‌ ಗಡಿಕಾರರು, ಈಶ್ವರ ಪೂಜಾರಿ ಮಿತ್ತಲಾಡಿ ಬರ್ಕೆ, ರವೀಂದ್ರ ಪೂಜಾರಿ ಕಲ್ಯಾಣಿ ಬರ್ಕೆ, ಧರ್ಣಪ್ಪ ಕೋಟ್ಯಾನ್‌ ಜೋಟಿಂಜಗುತ್ತು, ಪ್ರದೀಪ್‌ ಶಾಂತಿ ಕಾಶಿಪಟ್ಣ, ಸುರೇಶ್‌ ಕೋಟ್ಯಾನ್‌,‌ ಸಂಘದ ಕಾರ್ಯದರ್ಶಿ ಗಿರೀಶ್ ಕುಮಾರ್ ಹಂಡೇಲು, ಸೇವಾದಳ ಅಧ್ಯಕ್ಷ ದಿನೇಶ್ ಪೂಜಾರಿ, ಮಾಜಿ ಅಧ್ಯಕ್ಷ ರಂಜಿತ್‌ ಪೂಜಾರಿ, ಮಹಿಳಾ ಘಟಕ ಅಧ್ಯಕ್ಷೆ ಸವಿತಾ ದಿನೇಶ್, ನಿಕಟಪೂರ್ವ ಸಾವಿತ್ರಿ ಕೇಶವ, ಉದ್ಯಮಿ ನಾರಾಯಣ ಪಿ.ಎಂ, ನಿವೃತ್ತ ಸಹಾಯಕ ಆಯುಕ್ತ ಅಚ್ಯುತ ಪಿ., ಅಮೃತ ಮಹೋತ್ಸವ‌ ಸಮಿತಿ ಸಂಚಾಲಕ ಪ್ರಕಾಶ್ ಪೂಜಾರಿ, ಸಂಘಟನಾ ಕಾರ್ಯದರ್ಶಿ ಲಕ್ಷ್ಮಣ್ ಪೂಜಾರಿ, ಸಂಘದ ಮಾಜಿ ಪದ್ಮಯ್ಯ ಬಿ.ಸುವರ್ಣ, ರವೀಂದ್ರ ಸುವರ್ಣ ಪ್ರಮುಖರಾದ ಪದ್ಮರಾಜ ಪೇರಿ, ತುಕಾರಾಂ ಬಂಗೇರ, ವಾಸು ಪೂಜಾರಿ, ರವೀಂದ್ರ ಕರ್ಕೇರ, ನವೀನ್ಚಂದ್ರ ಕರ್ಕೇರ, ನವೀನ್ ಪಿ.ಕುಂದರ್, ಯೋಗಿತಾ ನವಾನಂದ,‌ ಸತೀಶ್ ಬಂಗೇರ, ಜಗದೀಶ್ ಪೂಜಾರಿ ಉಪಸ್ಥಿತರಿದ್ದರು.
ಗಣೇಶ್ ಅಳಿಯೂರು ಸ್ವಾಗತಿಸಿದರು. ಪ್ರಜ್ವಲ್‌, ರೋಹನ್ ಅತಿಕಾರಿಬೆಟ್ಟು ಹಾಗೂ ಸಂಜತಾ ಕಾರ್ಯಕ್ರಮ‌ ನಿರೂಪಿಸಿದರು. ಉಪಾಧ್ಯಕ್ಷ ಸುಶಾಂತ್ ಕರ್ಕೇರಾ ವಂದಿಸಿದರು.

ವರದಿ :ಜಗದೀಶ ಪೂಜಾರಿ ಕಡಂದಲೆ

LEAVE A REPLY

Please enter your comment!
Please enter your name here