ಇಬ್ಬರು ಹೆಂಡಿರಿದ್ರೂ ಮತ್ತೊಬ್ಬರ ಪತ್ನಿ ಮೇಲೆ ಕಣ್ಣು : ಮೂಟೆಯಲ್ಲಿ ಮುನ್ನಾ ಮೃತದೇಹ ಪತ್ತೆ

0
112

ಇಬ್ಬರು ಹೆಂಡಿರಿದ್ದರು, ಇಬ್ಬರಿಂದಲೂ ತಲಾ ಒಂಭತ್ತು ಒಂಭತ್ತು ಮಕ್ಕಳಂತೆ ಒಟ್ಟು 18 ಮಕ್ಕಳಿದ್ದರು. ಅವರಲ್ಲೊಂದು ಮಗಳಿಗೆ ಮದುವೆಯೂ ಆಗಿತ್ತು. ಆದರೂ ಆತನ ಚಪಲ ಮಾತ್ರ ನಿಂತಿರಲಿಲ್ಲ, ಪರಸ್ತ್ರೀ ಮೇಲೆಯೂ ಆತ ಕಣ್ಣು ಹಾಕಿದ್ದ ಸಂಬಂಧ ಬೆಳೆಸುವಂತೆ ಒತ್ತಾಯ ಹೇರಿ ಬ್ಲಾಕ್‌ಮೇಲ್ ಶುರು ಮಾಡಿದ ಪರಿಣಾಮ ಚಪಲ ಚೆನ್ನಿಗರಾಯ ಮೂಟೆಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ.

ಉತ್ತರ ಪ್ರದೇಶದ ಸುಮೇರ್‌ಪುರದಲ್ಲಿ ಈ ಘಟನೆ ನಡೆದಿದೆ. ಮುಸ್ತಕ್ ಗುಲ್ಸನ್ ಅಲಿಯಾಸ್ ಮುನ್ನಾ ಎಂಬಾತನೇ ಹೀಗೆ ಇಬ್ಬರು ಹೆಂಡಿರಿದ್ದರೂ ಮತ್ತೊಬ್ಬಳ ಸಹವಾಸ ಮಾಡುವುದಕ್ಕೆ ಹೋಗಿ ಶವವಾದವ. ತನ್ನ ಗ್ರಾಮದ ಮಾಜಿ ಮುಖ್ಯಸ್ಥನಾಗಿದ್ದ ಈತ ನಾಪತ್ತೆಯಾದ ಮರುದಿನ ಶವವಾಗಿ ಪತ್ತೆಯಾಗಿದ್ದ. ಕಾಲುವೆಯಲ್ಲಿ ಸಿಕ್ಕಿದ ಮೂಟೆಯಲ್ಲಿ ಆತನ ಶವ ಸಿಕ್ಕಿತ್ತು. ಘಟನೆಗೆ ಸಂಬಂಧಿಸಿದಂತೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

LEAVE A REPLY

Please enter your comment!
Please enter your name here