ಕಿಶೋರ್ ಶೆಟ್ಟಿ ದೆಪ್ಪುಣಿಗುತ್ತು ಗೆ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ

0
6

ಮಂಗಳೂರು : ಕಿಶೋರ್ ಶೆಟ್ಟಿ ದೆಪ್ಪುಣಿಗುತ್ತು ಇವರು ತುಳುನಾಡಿನ ಜಾನಪದ ದೈವರಾಧನೆಯ ಕ್ಷೇತ್ರದಲ್ಲಿ ಸುಮಾರು 26 ವರ್ಷ ಗಣನೀಯ ಸೇವೆ ಸಲ್ಲಿಸಿದ್ದಾರೆ. ಇವರಿಗೆ 2011ರ ವಿಶ್ವ ತುಳು ಸಮ್ಮೇಳನದಲ್ಲಿ ಮದು ಮದಿಪು ಪಾರಿ ಸ್ಪರ್ಧೆಯಲ್ಲಿ ಪ್ರಥಮ ಪ್ರಶಸ್ತಿ ಬಂದಿರುತ್ತದೆ. ಹಲವಾರು ಕಡೆ ದೈವರಾಧನೆಯ ವಿಚಾರ ಗೋಷ್ಠಿಯನ್ನು ನಡೆಸಿರುತ್ತಾರೆ. ನಮ್ಮ ಟಿವಿ, ನಮ್ಮ ಕುಡ್ಲ ಚಾನೆಲ್ ನಲ್ಲಿ ದೈವರಾಧನೆಯ ಕಾರ್ಯಕ್ರಮ ವನ್ನು ನಿರ್ವಹಿಸುತ್ತಾ ಬಂದಿರುತ್ತಾರೆ.

ಕೇಂದ್ರ ಸರಕಾರದ ಅಧೀನಕ್ಕೆ ಒಳಪಟ್ಟ ಡಿಡಿ ಚಂದನ ದೂರದರ್ಶನದಲ್ಲಿ ದೈವರಾಧನೆ ಎಂಬ ವಿಚಾರವನ್ನು ಮಂಡಿಸಿರುತ್ತಾರೆ. ಹಲವಾರು ಸಂಘ ಸಂಸ್ಥೆಗಳಿಂದ ಸನ್ಮಾನ ಪುರಸ್ಕಾರ ಗಳನ್ನು ಪಡೆದು ಇದೀಗ ಕರ್ನಾಟಕ ಸರಕಾರ ಕೊಡಮಾಡುವ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಯನ್ನು ಸ್ವೀಕರಿಸುತ್ತಾರೆ.