ತನ್ನದೇ ಟೆಂಪೋದಲ್ಲಿ ಶವವಾಗಿ ಪತ್ತೆಯಾದ ಮಾಲೀಕ: ಸಾವಿನ ಸುತ್ತ ಅನುಮಾನದ ಹುತ್ತ

0
13

ಚಿಕ್ಕಬಳ್ಳಾಪುರ,: ಅಶೋಕ್ ಲೇಲ್ಯಾಂಡ್ ಮಿನಿ ಟೆಂಪೋ ಮಾಲೀಕ ಕಂ ಚಾಲಕನೋರ್ವ ತನ್ನ ಟೆಂಪೋವನ್ನು ನಂಬಿಕೊಂಡು ಬಾಡಿಗೆಗೆ ಹೋಗುವುದರ ಮೂಲಕ ಜೀವನ ಸಾಗಿಸುತ್ತಿದ್ದ. ಬಾಡಿಗೆಗೆ ಹೋಗಿ ಬರುವುದಾಗಿ ಹೇಳಿ ಹೋದವನು ಟೆಂಪೋದಲ್ಲೇ ಶವವಾಗಿ ಪತ್ತೆಯಾಗಿದ್ದು , ಕೊಲೆ ಶಂಕೆ ವ್ಯಕ್ತವಾಗಿದೆ. ಬೆಂಗಳೂರು ಹೈದರಾಬಾದ್ ರಾಷ್ಟ್ರೀಯ ಹೆದ್ದಾರಿ 44ಕ್ಕೆ ಹೊಂದಿಕೊಂಡಿರುವ ಚಿಕ್ಕಬಳ್ಳಾಪುರ ತಾಲೂಕಿನ ಆರೂರು ಗ್ರಾಮದಲ್ಲಿ ಘಟನೆ ನಡೆದಿದೆ.

ಇನ್ನು ಸುಬ್ರಮಣಿಗೆ ಚಿಕ್ಕಬಳ್ಳಾಪುರ ತಾಲೂಕಿನ ಪರೇಸಂದ್ರ ಗ್ರಾಮದ ಪರಿಚಯಸ್ಥ ಮಹಿಳೆಯ ಜೊತೆ ಅನೈತಿಕ ಸಂಬಂಧ ಇತ್ತಂತೆ. ಆಕೆಯನ್ನು ನೋಡಿಕೊಂಡು ವಾಪಸ್ ಬರುವಾಗ ಏನೋ ನಡೆದಿದೆ ಅಂತ ಸುಬ್ರಮಣಿ ಸಾವಿನ ಬಗ್ಗೆ ಆತನ ತಮ್ಮ ಮುನಿರಾಜು ಅನುಮಾನ ವ್ಯಕ್ತಪಡಿಸಿದ್ದಾರೆ.

ಪೆರೇಸಂದ್ರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಸುಬ್ರಮಣಿ ಟೆಂಪೋದಲ್ಲೇ ಶವವಾಗಿದ್ದು, ಸಹಜ ಸಾವಾ, ಇಲ್ಲಾ ಯಾರಾದರೂ ಕೊಂದು ಶವ ಹಾಗೂ ವಾಹನ ಬಿಟ್ಟು ಪರಾರಿಯಾಗಿದ್ದಾರಾ ಎಂದು ಪೊಲೀಸರ ತನಿಖೆಯಿಂದ ತಿಳಿಯಬೇಕಿದೆ.

LEAVE A REPLY

Please enter your comment!
Please enter your name here