ಏ.3 ರಂದು ಗುರುವಂದನಾ ಮತ್ತು ಸ್ನೇಹಸಮ್ಮೇಳನ ಪೂರ್ವಭಾವಿ ಸಭೆಗೆ ಅಹ್ವಾನ

0
66

ದಾವಣಗೆರೆ : ದಾವಣಗೆರೆಯ ಮೋತಿ ವೀರಪ್ಪ ಕಾಲೇಜಿನ 2000-2001ನೇ ಸಲಿನ ವಿದ್ಯಾರ್ಥಿ-ವಿದ್ಯಾರ್ಥಿನಿಯರ ಗುರುವಂದನಾ ಕಾರ್ಯಕ್ರಮ ನಡೆಸಲು 03-04-2026ರಂದು ಶುಕ್ರವಾರ ಬೆಳಿಗ್ಗೆ 11 ಗಂಟೆಗೆ ಮೋತಿ ವೀರಪ್ಪ ಕಾಲೇಜಿನ ಸಭಾಂಗಣದಲ್ಲಿ ಸರ್ವ ಸದಸ್ಯರ ಸಭೆ ಕರೆಯಲಾಗಿದೆ ಎಂದು ಹಳೇ ಹಿರಿಯ ವಿದ್ಯಾರ್ಥಿ ಎಂ.ಕೆ.ಸಂತೋಷ್ ತಿಳಿಸಿದ್ದಾರೆ.

ಗುರುವಂದನಾ ಮತ್ತು ಸ್ನೇಹಸಮ್ಮೇಳನ ನಡೆಸಲು ಪೂರ್ವ ಸಿದ್ಧತೆಗಾಗಿ, ರೂಪರೇಷೆಗಳನ್ನು ಕಾರ್ಯಕ್ರಮದ ಯೋಜನೆಗಳನ್ನು ಮುಕ್ತವಾಗಿ ಚರ್ಚಿಸಿ ಕಾರ್ಯಕ್ರಮವನ್ನು ವಿಜೃಂಭಣೆಯಿAದ ವೈಭವಪೂರ್ಣ ನಡೆಸಲು ತೀರ್ಮಾನ ಆಗಬೇಕಾಗಿದೆ ಎಂದು ಹಳೇ ವಿದ್ಯಾರ್ಥಿ ಡಿ.ಎ.ಆರ್.ಪೊಲೀಸ್ ಡಿ.ವೈ.ಮಂಜಪ್ಪ ಪ್ರಕಟಿಸಿದ್ದಾರೆ.

ದಯವಿಟ್ಟು ಈ ಅಪರೂಪದ ಸರ್ವ ಸದಸ್ಯರ ವಿದ್ಯಾರ್ಥಿ-ವಿದ್ಯಾರ್ಥಿನಿಯರು ತಮ್ಮ ಮಿತ್ರರಿಗೆ ತಿಳಿಸಿ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಈ ಗುರುವಂದನಾ ಮತ್ತು ಸ್ನೇಹಸಮ್ಮೇಳನ ಯಶಸ್ವಿಗೊಳಿಸಿ ಅಕ್ಷರಾಭ್ಯಾಸ ನೀಡಿದ ಗುರುಗಳಿಗೆ ಪಾದಾರ್ಪಣೆ ಮಾಡಿ ಸುಸಂಪನ್ನಗೊಳಿಸಲು ದಾವಣಗೆರೆಯ ವಕೀಲರಾದ ಹಳೇ ವಿದ್ಯಾರ್ಥಿ ಜಿ.ಲೋಕೇಶ್ ಹಾಗೂ ಮುತ್ತುರಾಜ್ ವಿನಂತಿಸಿದ್ದಾರೆ.

ಹೆಚ್ಚಿನ ಮಾಹಿತಿಗೆ 9886577544, 8660307294, 9164010444, 8722229621 ಈ ಸನೀಹವಾಣಿಗಳಿಗೆ ದಯವಿಟ್ಟು ಸಂಪರ್ಕಿಸಿ.

LEAVE A REPLY

Please enter your comment!
Please enter your name here