ಮೂಲವ್ಯಾಧಿಯಿಂದ ಮಧುಮೇಹದವರೆಗೆ : 50ಕ್ಕೂ ಹೆಚ್ಚು ಕಾಯಿಲೆಗಳಿಗೆ ಪರಿಹಾರ ಎಂದೇ ಹೇಳಲಾಗುವ ಗಿಡಮೂಲಿಕೆ..!

0
78

ಕೃಷಿಯಲ್ಲಿ ಸಿಗುವ ಅನೇಕ ಗಿಡಮೂಲಿಕೆಗಳು ನಮ್ಮ ಆರೋಗ್ಯಕ್ಕೆ ವರದಾನವಾಗಿವೆ. ಅಂತಹದ್ದೇ ಒಂದು ಅಪರೂಪದ ಮತ್ತು ಶಕ್ತಿಯುತ ಔಷಧೀಯ ಸಸ್ಯವೇ ‘ಅತಿಬಲ’ ಆಯುರ್ವೇದ, ಸಿದ್ದ ಮತ್ತು ಯುನಾನಿ ವೈದ್ಯಕೀಯ ಪದ್ಧತಿಗಳಲ್ಲಿ ಈ ಗಿಡಕ್ಕೆ ವಿಶೇಷ ಸ್ಥಾನವಿದೆ.

ಸುಮಾರು 51ಕ್ಕೂ ಹೆಚ್ಚು ಅಪಾಯಕಾರಿ ರೋಗಗಳನ್ನು ಬುಡಸಮೇತ ಕಿತ್ತೆಸೆಯುವ ಶಕ್ತಿ ಈ ಸಸ್ಯಕ್ಕಿದೆ ಎಂದು ಹೇಳಲಾಗುತ್ತದೆ.

ಹಲ್ಲು ಮತ್ತು ಒಸಡಿನ ಸಮಸ್ಯೆ : ಅತಿಬಲ ಎಲೆಗಳ ಕಷಾಯದಿಂದ ದಿನಕ್ಕೆ 3-4 ಬಾರಿ ಬಾಯಿ ಮುಕ್ಕಳಿಸುವುದರಿಂದ ಒಸಡಿನ ಊತ ಮತ್ತು ನೋವು ಕಡಿಮೆಯಾಗುತ್ತದೆ.

ಮೂತ್ರದ ಸಮಸ್ಯೆ : ಪದೇ ಪದೇ ಮೂತ್ರ ವಿಸರ್ಜನೆಯಾಗುವ ಸಮಸ್ಯೆ ಇದ್ದರೆ, ಈ ಗಿಡದ ಬೇರಿನ ತೊಗಟೆಯ ಪುಡಿಯನ್ನು ಸಕ್ಕರೆಯೊಂದಿಗೆ ಸೇವಿಸುವುದರಿಂದ ಪರಿಹಾರ ಸಿಗುತ್ತದೆ.

ಮೂಲವ್ಯಾಧಿ (Piles) : ಇದರ ಎಲೆಗಳನ್ನು ನೀರಿನಲ್ಲಿ ಕುದಿಸಿ ಕಷಾಯ ಮಾಡಿ, ಅದಕ್ಕೆ ತಾಳೆ ಬೆಲ್ಲ ಸೇರಿಸಿ ಕುಡಿಯುವುದರಿಂದ ಮೂಲವ್ಯಾಧಿ ಸಮಸ್ಯೆಗೆ ಉತ್ತಮ ಉಪಶಮನ ದೊರೆಯುತ್ತದೆ.

ಕೆಮ್ಮು ಮತ್ತು ಕಫ : ಅತಿಬಲದ ಎಲೆಗಳನ್ನು ಇತರೆ ಗಿಡಮೂಲಿಕೆಗಳೊಂದಿಗೆ ಸೇರಿಸಿ ಕಷಾಯ ಮಾಡಿ ಕುಡಿಯುವುದರಿಂದ ಹಳೆಯ ಕೆಮ್ಮು ವಾಸಿಯಾಗುತ್ತದೆ.

ದೈಹಿಕ ದೌರ್ಬಲ್ಯ : ಸದಾ ಸುಸ್ತು ಅಥವಾ ನಿಶಕ್ತಿಯಿಂದ ಬಳಲುವವರು ಈ ಗಿಡದ ಬೀಜಗಳನ್ನು ಬೇಯಿಸಿ ತಿನ್ನುವುದರಿಂದ ದೇಹಕ್ಕೆ ಅಪಾರ ಶಕ್ತಿ ಲಭಿಸುತ್ತದೆ.

ಇತರ ರೋಗಗಳು : ಕಾಮಾಲೆ, ಸಂಧಿವಾತ, ಮಧುಮೇಹ (Diabetes), ಅಲರ್ಜಿ, ಕ್ಷಯ (TB), ರಕ್ತಹೀನತೆ ಮತ್ತು ಕಿವಿ ನೋವಿನಂತಹ ಸಮಸ್ಯೆಗಳಿಗೂ ಇದು ರಾಮಬಾಣವಾಗಿದೆ.

ಈ ಸಸ್ಯವು ಅನೇಕ ಔಷಧೀಯ ಗುಣಗಳನ್ನು ಹೊಂದಿದ್ದರೂ ಸಹ, ಇದನ್ನು ಬಳಸುವ ಮೊದಲು ಆಯುರ್ವೇದ ತಜ್ಞರ ಅಥವಾ ವೈದ್ಯರ ಸಲಹೆ ಪಡೆಯುವುದು ಅತ್ಯಗತ್ಯ. ಮನೆಮದ್ದುಗಳು ಎಲ್ಲರಿಗೂ ಒಂದೇ ರೀತಿ ಪರಿಣಾಮ ಬೀರದಿರಬಹುದು, ಆದ್ದರಿಂದ ಮುನ್ನೆಚ್ಚರಿಕೆ ವಹಿಸುವುದು ಉತ್ತಮ.

LEAVE A REPLY

Please enter your comment!
Please enter your name here