ಕುಸುಮ ರೋಗಕ್ಕೆ ಪರಿಹಾರ ರಕ್ತದಾನ ಅದೇ ದೇವರ ಸೇವೆ ಕರ್ನಾಟಕ ಹಿಮಫಿಲಿಯಾ ಸೊಸೈಟಿಗೆ ಆರ್ಥಿಕ ಸಹಕಾರ, ಸಯೋಗ ನೀಡಿದ್ದು ದಾವಣಗೆರೆಯ ವಿವಿಧ ಮನೆತನದ ದಾನಿಗಳು ಎಲ್ಲರ ತನು,ಮನ, ಧನಗಳಿಂದ ಈ ಆಸ್ಪತ್ರೆ ನಿರಂರ ಮೂವತ್ತು ವರ್ಷಗಳಿಂದ ಸುಸಜ್ಜಿತವಾಗಿ ನಡೆಯುತ್ತಿರುವುದು ದೇವರ ದಯೆ ಕುಸುಮ ಕಾಯಿಲೆಯ ಬಗ್ಗೆ ವಿವರ ನೀಡಿದ ಪದ್ಮಶ್ರೀ ಡಾ|| ಸುರೇಶ್ ಹನಗವಾಡಿ ತಮ್ಮ ಮನದಾಳದ ಅನಿಸಿಕೆಗಳನ್ನು ಹಂಚಿಕೊಂಡರು.

ದಾವಣಗೆರೆಯ ಕರ್ನಾಟಕ ಹಿಮಫಿಲಿಯಾ ಸೊಸೈಟಿ ಸಭಾಂಗಣದಲ್ಲಿ ನಿನ್ನೆ ತಾನೇ ನಡೆದ ದಾವಣಗೆರೆಯ ಕಲಾಸಿರಿ, ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಗಳ ಸಹಯೋಗದಲ್ಲಿ ಡಾ|| ಸುರೇಶ್ ಹನಗವಾಡಿಯವರಿಗೆ ಇತ್ತೀಚಿಗೆ ರಾಷ್ಟçಮಟ್ಟದ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದು ಅವರಿಗೆ ಗೌರವ ಪೂರ್ವಕವಾಗಿ ವಿಜೃಂಭಣೆಯಿAದ ಅಭಿಮಾನದಿಂದ ಅಭಿನಂದಿಸಿ ಸನ್ಮಾನಿಸಲಾಯಿತು.
ಸಮಾರಂಭದ ಅಧ್ಯಕ್ಷತೆ ವಹಿಸಿ ಜ್ಯೋತಿಬೆಳಗುವ ಮೂಲಕ ಉದ್ಘಾಟಿಸಿದ ಕಲಾಸಿರಿ, ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಗಳ ಅಧ್ಯಕ್ಷರಾದ ವಾಸುದೇವ ಲಕ್ಷö್ಮಣ್ ರಾಯ್ಕರ್ ಮಾತನಾಡಿ, ಡಾ|| ಸುರೇಶ್ ಹನಗವಾಡಿಯವರಿಗೆ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದು ಶ್ಲಾಘನೀಯ ಎಂದರು.
ಮುಖ್ಯ ಅತಿಥಿಗಳಾಗಿ ದಾವಣಗೆರೆಯ ನಿವೃತ್ತ ಪೊಲೀಸ್ ಅಧೀಕ್ಷಕರಾದ ರವಿನಾರಾಯಣ್, ದಾವಣಗೆರೆ ಲಯನ್ಸ್ ಕಲ್ಬ್ ಮಾಜಿ ಜಿಲ್ಲಾ ರಾಜ್ಯಪಾಲರಾದ ಬೆಳ್ಳೂಡಿ ಶಿವಕುಮಾರ್, ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ ಶೆಣೈಯವರು ಮಾತನಾಡಿ, ಭಾರತದ್ಲಲಿ ಮೊಟ್ಟ ಮೊದಲು ಹಿವೆಫಿಲಿಯಾ ಆಸ್ಪತ್ರೆ ದಾವಣಗೆರೆಯಲ್ಲಿ 30 ವರ್ಷಗಳಿಂದ ಸ್ಥಾಪನೆಯಾಗಿದ್ದು.
ದಾವಣಗೆರೆಗೆ ಹೆಮ್ಮೆಯ ವಿಷಯ. ಇದು ಆಸ್ಪತ್ರೆಯ ಜೊತೆಗೆ ಸಾರ್ವಜನಿಕರಿಗೆ ಸಹಾಯ ಮಾಡುತ್ತಿರುವುದು ಇದೇ ದೇವಾಲಯ. ದಾವಣಗೆರೆ ಜಿಲ್ಲಾಡಳಿತ, ಮಹಾನಗರ ಪಾಲಿಕೆಯಿಂದ ಡಾ|| ಸುರೇಶ್ ಹನಗವಾಡಿ ಯವರಿಗೆ ಗೌರವಿಸಬೇಕಾಗಿತ್ತು ಎಂದರು. ಲಯನ್ಸ್ ಕ್ಲಬ್ ಗರ್ವನರ್‌ರಾದ ಆರ್.ಹೆಚ್. ಶ್ರೀನಿವಾಸಮೂರ್ತಿಯವರಿಗೆ ಅವರ ಸಾಧನೆಗಳನ್ನು ಗುರುತಿಸಿ ಗೌರವ ಪೂರ್ವಕ ಸನ್ಮಾನಿಸಲಾಯಿತು.
ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಗಳ ಗೌರವ ಅಧ್ಯಕ್ಷರಾದ ಕೆ.ಹೆಚ್.ಮಂಜುನಾಥ್, ಕಲಾಕುಂಚ ಮಹಿಳಾ ವಿಭಾಗದ ಸಂಸ್ಥಾಪಕರಾದ ಜ್ಯೋತಿ ಗಣೇಶ್‌ಶೆಣೈ, ಕಲಾಕುಂಚ ಮಹಿಳಾ ವಿಭಾಗದ ಅಧ್ಯಕ್ಷರಾದ ಹೇಮಾ ಶಾಂತಪ್ಪ ಪೂಜಾರಿ, ಮೀರಾ ಡಾ| ಸುರೇಶ್ ಹನಗವಾಡಿ ಗೌರವ ಉಪಸ್ಥಿತರಿದ್ದರು.
ಕಲಾಕುಂಚದ ಸಿದ್ದವೀರಪ್ಪ ಬಡಾವಣೆ ಶಾಕೆಯ ಅಧ್ಯಕ್ಷರಾದ ಲಲಿತಾ ಕಲ್ಲೇಶ್‌ರವರು ಸಮಾರಂಭದ ಪ್ರಾರಂಭದಲ್ಲಿ ಪ್ರಾರ್ಥನೆ ಮಾಡಿದರು. ಪುಷ್ಪಾ ಮಂಜುನಾಥ್ ಸ್ವಾಗತಿಸಿದರು. ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಕೆ.ಸಿ. ಉಮೇಶ್ ಅಚ್ಚುಕಟ್ಟಾಗಿ ನಿರೂಪಿಸಿದರು.
ಕಲಾಸಿರಿ, ಕಲಾಕುಂಚ ಸಂಸ್ಥೆಗಳ ಪದಾಧಿಕರಿಗಳು, ಸದಸ್ಯರುಗ ಪ್ರೇಕ್ಷಕರಾಗಿ ಉಪಸ್ಥಿತರಿದ್ದರು. ಕೊನೆಯಲ್ಲಿ ಶಿಲ್ಪಾ ಉಮೇಶ್ ವಂದಿಸಿದರು.

