ಕಾರ್ಕಳ : ಮೈನ್ ಶಾಲೆಯಲ್ಲಿ ಕಲಾ ಸಿಂಚನ ಬೇಸಿಗೆ ಶಿಬಿರ

0
13

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಾರ್ಕಳ ಮೈನ್ ಇಲ್ಲಿ ಮಕ್ಕಳ ಪಠ್ಯೇತರ ಚಟುವಟಿಕೆಗಳಿಗೆ ಪೂರಕವಾದ “ಕಲಾ ಸಿಂಚನ -2026” ಬೇಸಿಗೆ ಶಿಬಿರದ ಉದ್ಘಾಟನೆ ಸಮಾರಂಭ ನಡೆಯಿತು. ಕಾರ್ಕಳ ಪುರಸಭೆಯ ಸದಸ್ಯ ಪ್ರದೀಪ್ ರಾಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಮೇಕ್ ಸಮ್ ಒನ್ ಸ್ಮೈಲ್ ಟ್ರಸ್ಟಿನ ಗುರುಪ್ರಸಾದ್ ಶೆಟ್ಟಿ , ಕಾರ್ಕಳದ ಮಾನಸ ಕಂಫರ್ಟ್ಸ್ ನ ಮಾಲೀಕರಾದ ನವೀನ್ ದೇವಾಡಿಗ, ಸಾಣೂರು ಕ್ಲಸ್ಟರಿನ ಸಿ.ಆರ್.ಪಿ ಜ್ಯೋತಿ , ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷೆಯಾದ ಮಾಲಾಶ್ರೀ, ಶಿಬಿರದ ನಿರ್ದೇಶಕರಾದ ಚಂದ್ರನಾಥ ಬಜಗೋಳಿ , ಸಂಪನ್ಮೂಲ ವ್ಯಕ್ತಿ ಎಸ್‌.ವಿ.ಟಿ ವನಿತಾ ಪದವಿಪೂರ್ವ ಕಾಲೇಜಿನ ದೇವದಾಸ್ ಕೆರೆಮನೆ , ಪದವೀಧರ ಸಹ ಶಿಕ್ಷಕಿ ಪ್ರತಿಮಾ ದೇವದಾಸ್ , ಗೌರವ ಶಿಕ್ಷಕಿ ಅಶ್ವಿನಿ, ಅತಿಥಿ ಶಿಕ್ಷಕಿ ವಾಣಿ ಹಾಗೂ ವಿದ್ಯಾರ್ಥಿಗಳ ಪೋಷಕರು ಉಪಸ್ಥಿತರಿದ್ದರು.

ಹೆಸರಾಂತ ಲೆಕ್ಕ ಪರಿಶೋಧಕರು ಹಾಗೂ ದಾನಿಗಳಾದ ಕಾರ್ಕಳ ಕಮಲಾಕ್ಷ ಕಾಮತ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಮುಖ್ಯ ಶಿಕ್ಷಕಿ ಶಶಿಕಲಾ ಪ್ರಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ಗೌರವ ಶಿಕ್ಷಕಿ ಮಧುಶ್ರೀ ವಂದಿಸಿದರು. ಸಹ ಶಿಕ್ಷಕರಾದ ಶಿವಾನಂದ ನಿರೂಪಿಸಿದರು.

LEAVE A REPLY

Please enter your comment!
Please enter your name here