ಗುಣವಂತೆ ಶ್ರಿ ಶಂಭುಲಿಂಗೇಶ್ವರ ದೇವರ ಪುನರ್ ಪ್ರತಿಷ್ಠೆ ಯಲ್ಲಿ ಜನಮನ ಸೆಳೆದ ಉಮೇಶ ಮುಂಡಳ್ಳಿ ಭಕ್ತಿ ಸಂಗೀತ

0
36

ಹೊನ್ನಾವರ: ಪುರಾಣ ಪ್ರಸಿದ್ಧ ಶ್ರೀ ಗುಣವಂತೆ ಶ್ರೀ ಶಂಭುಲಿಂಗೇಶ್ವರ ದೇವರ ಪುನರ್ ಪ್ರತಿಷ್ಠೆ ಅಷ್ಠ ಬಂಧ ಬ್ರಹ್ಮ ಕಲಶೋತ್ಸವ ಮೂರನೆ ದಿನ ರವಿವಾರ ಮದ್ಯಾಹ್ನದ ಸಾಂಸ್ಕೃತಿಕ ಕಾರ್ಯಕ್ರಮದ ಭಾಗವಾಗಿ ಉಮೇಶ ಮುಂಡಳ್ಳಿ ಅವರ ನಿನಾದ ಕಲ್ಚರಲ್ ಅಕಾಡೆಮಿ ಭಟ್ಕಳ. ವತಿಯಿಂದ ಭಕ್ತಿ ಸಂಗೀತ ಕಾರ್ಯಕ್ರಮ ನಡೆಯಿತು.

ಮದ್ಯಾಹ್ನ ಎರಡು ಗಂಟೆಯಿಂದ ಮೂರುವರೆ ಗಂಟೆವರೆಗೂ ನಡೆದ ಭಕ್ತಿ ಸಂಗೀತ ಕಾರ್ಯಕ್ರಮ ದಲ್ಲಿ ಉಮೇಶ ಮುಂಡಳ್ಳಿ ಹಾಗೂ ಬಳಗದವರು ಗಣೇಶ ಸ್ತುತಿ ವಿಜಯ ವಿನಾಯಕನೇ, ಸೋಜುಗದ ಸುಜುಮಲ್ಲಿಗೆ, ತರವಲ್ಲ ತಗಿ ನಿನ್ನ ತಂಬೂರಿ,ರಾಮ ನಾಮ ಎಂಬ ಮೊದಕಾದ ಗೀತೆಗಳು ಅದ್ಬುತ ವಾಗಿ ಒಂದಕ್ಕಿಂತ ಒಂದು ಹೆಚ್ಚು ಎನ್ನುವಂತೆ ಮೂಡಿ ಬಂದವು. ಮುಂಡಳ್ಳಿಯವರು ಭೈರವಿಯಲ್ಲಿ ಹಾಡಿದ ತಂಬೂರಿ ಮೀಟಿದವ ಹಾಡು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.

ಉಮೇಶ ಮುಂಡಳ್ಳಿ ಯವರೊಂದಿಗೆ ನಿನಾದ ಉಮೇಶ ಹಾಗೂ ಉತ್ಥಾನ ಉಮೇಶ ಮುಂಡಳ್ಳಿ ಸಹ ಗಾಯನದಲ್ಲಿ ಸಹಕರಿಸಿದರು. ತಬಲದಲ್ಲಿ ಸುಬ್ರಮಣ್ಯ ಆಚಾರ್ಯ ಗುಣವಂತೆ, ಹಾಗೂ ಹಾರ್ಮೋನಿಯಂ ನಲ್ಲಿ ಕಮಲಾಕರ ಆಚಾರ್ಯ ಅಗ್ರಹಾರ ಇವರು ಸಹಕರಿಸಿದ್ದರು.

ಕೊನೆಯಲ್ಲಿ ಶ್ರೀ ಶಂಭುಲಿಂಗೇಶ್ವರ ದೇವಸ್ಥಾನ ವತಿಯಿಂದ ಅಧ್ಯಕ್ಷರಾದ ನರಸಿಂಹ ಪಂಡಿತ ಅವರು ಉಮೇಶ ಮುಂಡಳ್ಳಿ ಅವರನ್ನು ಗೌರವಿಸಿದರು. ಈ ಸಂಧರ್ಭದಲ್ಲಿ ದೇವಸ್ಥಾನದ ಉಪಾಧ್ಯಕ್ಷ ಎಂ.ಎಸ್.ಹೆಗಡೆ ಹಾಗೂ ಕಾರ್ಯದರ್ಶಿ ಎಂ.ವಿ.ಹೆಗಡೆ ಮೊದಲಾದ ಗಣ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here