ಪುಂಜಾಲಕಟ್ಟೆ : ವಗ್ಗ – ಕಾರಿಂಜ ಕ್ರಾಸ್ ಎಂಬಲ್ಲಿ ಜಗದೀಶ್ ಪೂಜಾರಿ ತನ್ನ ಸ್ಕೂಟರ್‌ನಲ್ಲಿ ಹೋಗುತ್ತಿದ್ದಾಗ ಬಿ.ಸಿ.ರೋಡ್ ಕಡೆಯಿಂದ ಬೆಳ್ತಂಗಡಿ ಕಡೆಗೆ ಸೈಫುನ್ನೀಸ ಎಂಬವರನ್ನು ಹಿಂಬದಿ ಸಹ ಸವಾರಿಣಿಯನ್ನಾಗಿ ಕುಳ್ಳಿರಿಸಿಕೊಂಡು ಬರುತ್ತಿದ್ದ ಮೊಹಮದ್ ಯಾಸೀನ್ ನಿರ್ಲಕ್ಷ್ಯತನದಿಂದ ಸ್ಕೂಟರ್ ಚಲಾಯಿಸಿ ಜಗದೀಶ್ ಅವರ ಸ್ಕೂಟರಿಗೆ ಢಿಕ್ಕಿ ಹೊಡೆದಿದ್ದಾರೆ.
ಅಪಘಾತದ ಪರಿಣಾಮ ಎರಡೂ ಸ್ಕೂಟರಿನಲ್ಲಿದ್ದವರು ರಸ್ತೆಗೆ ಬಿದ್ದು ಗಾಯಗೊಂಡ್ಡಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಬಂಟ್ವಾಳ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

