ಕಾರ್ಕಳ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಜನ್ಮ ಜಯಂತಿ ಆಚರಣೆ

0
10

ಕಾರ್ಕಳ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಸಂವಿಧಾನ ಶಿಲ್ಪಿ ಭಾರತರತ್ನ ಡಾ. ಬಿ ಆರ್ ಅಂಬೇಡ್ಕರ್ ಜಯಂತಿಯನ್ನು ಆಚರಿಸಲಾಯಿತು. ಸಭೆಯನ್ನುದ್ದೇಶಿಸಿ ಮಾತನಾಡಿದ ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ವಕ್ತಾರ ಬಿಪಿನ್ ಚಂದ್ರಪಾಲ್ ನಕ್ರೆ ಮಾತನಾಡಿ ಜ್ಙಾನ ಎನ್ನುವುದು ಕೇವಲ ಕೆಲವೇ ವರ್ಗಕ್ಕೆ ಸೀಮಿತವಲ್ಲ, ಜ್ಙಾನವು ಎಲ್ಲಾ ವರ್ಗಗಳಿಗೂ ಸೇರಿದ್ದು ಎನ್ನುವುದನ್ನು ಅಂಬೇಡ್ಕರ್ ಅವರು ತಿಳಿದುಕೊಂಡು ಎಲ್ಲರಿಗೂ ಅವಕಾಶವನ್ನು ಕಲ್ಪಿಸಿದರು.

ಜಗತ್ತಿನ ಎಲ್ಲಾ ದೇಶಗಳ ಸಂವಿಧಾನದ ಆಶಯಗಳನ್ನು ಒಗ್ಗೂಡಿಸಿ ಭಾರತದ ಸಂವಿಧಾನವನ್ನು ಅಂಬೇಡ್ಕರ್ ಅವರು ರಚಿಸಿದ್ದಾರೆ, ಅಂಬೇಡ್ಕರ್ ರಚಿತ ಸಂವಿಧಾನದಲ್ಲಿ ಎಲ್ಲರಿಗೂ ಸಮಾನವಾದ ಹಕ್ಕುಗಳಿಗೆ. ಆದರೆ ಇಂದು ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿಯು ಲೋಕಸಭೆಯಲ್ಲಿ 400 ಸೀಟು ಗೆದ್ದು ಕೊಂಡರೆ ಸಂವಿಧಾನವನ್ನು ಬದಲಾವಣೆ ಮಾಡುತ್ತೇವೆ ಎನ್ನುವ ಮಾತಗಳನ್ನಾಡುತ್ತಿರುವುದು ಇದು ಸಂವಿಧಾನಕ್ಕೆ ಒಡ್ಡುತ್ತಿರುವ ಬೆದರಿಕೆಯಾಗಿದೆ, ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯುವ ಮೂಲಕ ಸಂವಿಧಾನದ ರಕ್ಷಣೆ ಮಾಡಬೇಕಾಗಿದೆ ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ ಪ್ರಸಿದ್ಧ ವಕೀಲರು ಹಿರಿಯ ಕಾಂಗ್ರೆಸ್ ನಾಯಕರಾದ ಶೇಖರ ಮಡಿವಾಳರವರು ಮಾತನಾಡುತ್ತಾ ಅಟಲ್ ಬಿಹಾರಿ ವಾಜಪೇಯಿ ಪ್ರಧಾನಿಯಾಗಿರುವ ಸಂದರ್ಭದಲ್ಲಿ ಅಂಬೇಡ್ಕರ್, ಗಾಂಧಿ ಅವರನ್ನು ಅವಮಾನಿಸುವ ಘಟನೆಗಳು ಇರಲಿಲ್ಲ, ಆದರೆ ಇಂದು ಮೋದಿ ಆಡಳಿತದಲ್ಲಿ ಅಂಬೇಡ್ಕರ್ ಹಾಗೂ ಗಾಂಧಿಯವರನ್ನು ಅವ್ಯಾಹತವಾಗಿ ಅವಮಾನಿಸುವ ಪ್ರವೃತ್ತಿಯು ದಿನಂಪ್ರತಿ ವರದಿಯಾಗುತ್ತಿದೆ, ನಮ್ಮದೇ ಕಾರ್ಕಳ ಕ್ಷೇತ್ರದಲ್ಲಿ ಬೋಳ ಗ್ರಾಮದಲ್ಲಿ ರಾಷ್ಟ್ರ ನಾಯಕರನ್ನು ಅವಮಾನಿಸುವ ಘಟನೆಗಳು ನಡೆದಿರುವುದು ಖೇದಕರ, ಸಂವಿಧಾನವೇ ಸವಾಲುಗಳನ್ನು ಎದುರಿಸುವ ಈ ದಿನಗಳಲ್ಲಿ ನಾವೆಲ್ಲರೂ ಸಂವಿಧಾನ ರಕ್ಷಣೆಗೆ ಕಟಿಬದ್ದರಾಗಬೇಕಾಗಿದೆ ಎಂದರು.

ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶುಭದ್ ರಾವ್, ಡಾ. ಬಿ.ಆರ್. ಅಂಬೇಡ್ಕರ್ ಅವರು ಬೆಂಕಿಯಲ್ಲಿ ಅರಳಿದ ಹೂವು, ಅಂಬೇಡ್ಕರ್ ಅವರು ಅನುಭವಿಸಿದಷ್ಟು ನೋವು ಬೇರೆ ಯಾರು ಅನುಭವಿಸಲು‌ ಸಾಧ್ಯವಿಲ್ಲ. ಅಂಬೇಡ್ಕರ್ ರವರು ಅನುಭವಿಸಿದ ನೋವಿನ ಪ್ರತಿಫಲವೇ ಇವತ್ತಿನ ಭಾರತದ ಸುಂದರವಾದ ಸಂವಿಧಾನವಾಗಿದೆ. ಜೀವನದಲ್ಲಿ ತಾವು ಅನುಭವಿಸಿದ ನೋವನ್ನೆಲ್ಲ ಅವುಡುಗಚ್ಚಿಕೊಂಡು ಸಹಿಸಿಕೊಂಡು ತಮ್ಮ ಶಿಕ್ಷಣದ ಶಕ್ತಿಯ ಮೂಲಕ ಕಾನೂನಾತ್ಮಕವಾಗಿ ಸಂವಿಧಾನವನ್ನು ಜಾರಿಗೊಳಿಸಿ ಇವತ್ತು ಎಲ್ಲಾ ವರ್ಗದ ರಕ್ಷಣೆಗೆ ಕಾರಣೀಕರ್ತರಾದವರು ಅಂಬೇಡ್ಕರ್ ರವರು, ಹಾಗಾಗಿ ನಮಗೆಲ್ಲರಿಗೂ ಅಂಬೇಡ್ಕರ್ ಅವರು ದೇವತಾ ಸಮಾನರಾಗಿದ್ದಾರೆ ಎಂದರು.

ಅಂಬೇಡ್ಕರ್ ಭಾವಚಿತ್ರಕ್ಕೆ ದೀಪವನ್ನು ಬೆಳಗಿ ಉದ್ಘಾಟಿಸಿದ ಕಾರ್ಕಳ ಬ್ಲಾಕ್ ಪರಿಶಿಷ್ಟ ಪಂಗಡಗಳ ಅಧ್ಯಕ್ಷ ದೇವದಾಸ್.ಆರ್ ಅವರು ಅಂಬೇಡ್ಕರ್ ಜಯಂತಿಯ ಶುಭಾಶಯಗಳು ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲಾ ಕಾಂಗ್ರೆಸ್ ಉಪಾದ್ಯಕ್ಷರಾದ ಸುಧಾಕರ ಕೋಟ್ಯಾನ್, ಜಿಲ್ಲಾ ಎಸ್.ಟಿ ಘಟಕದ ಉಪಾದ್ಯಕ್ಷ ಸೋಮನಾಥ ನಾಯಕ್, ಮಹಿಳಾ ಕಾಂಗ್ರೆಸ್ ಅದ್ಯಕ್ಷೆ ಭಾನು ಭಾಸ್ಕರ ಪೂಜಾರಿ, ಮಾಜಿ ಜಿಲ್ಲಾ ಪಂಚಾಯತ ಸದಸ್ಯ ಸುಪ್ರಿತ್ ಶೆಟ್ಟಿ ಕೆದಿಂಜೆ, ಬ್ಲಾಕ್ ಉಪಾದ್ಯಕ್ಷ ಜಾರ್ಜ್ ಕ್ಯಾಸ್ತಲಿನೊ, ವಿವೇಕಾನಂದ ಶೆಣೈ, ಹೇಮಂತ ಆಚಾರ್ಯ, ಸಂತೋಷ್ ದೇವಾಡಿಗ ಬೋಳ, ರಾಘವ ನಾಯಕ್ ಮುದ್ರಾಡಿ, ಮಲ್ಲಿಕ್ ಅತ್ತೂರು, ರಮೇಶ್ ಬಜಕಳ, ಸಿರಿಯಣ್ಣ ಶೆಟ್ಟಿ, ಶಶಿಧರ, ರೆಹಮತ್, ದಿನೇಶ್ ಹೆಬ್ರಿ, ಸುನೀಲ್ ಭಂಡಾರಿ, ಯೋಗೀಶ್ ಮೂಲ್ಯ ಬೋಳ, ಪ್ರತಿಮಾ ರಾಣೆ, ಕಾಂತಿ ಶೆಟ್ಟಿ, ಅನ್ನಪ್ಪ ನಕ್ರೆ, ನ್ಯಾಯವಾದಿ ರಾಘವ ಕಡ್ತಲ ಮೊದಲಾವರು ಉಪಸ್ಥಿತರಿದ್ದರು.

ಬ್ಲಾಕ್ ವಕ್ತಾರ ಪ್ರದೀಪ್ ಬೇಲಾಡಿ ಕಾರ್ಯಕ್ರಮ ನಿರೂಪಿಸಿ ಬ್ಲಾಕ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಶೇಖ್ ಶಭೀರ್ ಮಿಯ್ಯಾರು ಧನ್ಯವಾದವಿತ್ತರು.

LEAVE A REPLY

Please enter your comment!
Please enter your name here