ಬಿಎನ್‌ಐ ವೃದ್ಧಿ (BNI Vriddhi) ಚಾಪ್ಟರ್‌ನಿಂದ ಅದ್ಧೂರಿ ‘ಟರ್ಮ್ 2.0’ ಪ್ರಶಸ್ತಿ ಪ್ರಧಾನ ಸಮಾರಂಭ

0
49

ಉಡುಪಿ : ಬಿಎನ್‌ಐ ವೃದ್ಧಿ ಚಾಪ್ಟರ್ ತನ್ನ ‘ಟರ್ಮ್ 2.0’ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಉಡುಪಿಯ ಟೈಮ್ಸ್ ಸ್ಕ್ವೇರ್ ಓಷನ್ ಪರ್ಲ್ ಹೋಟೆಲ್‌ನಲ್ಲಿ ಅದ್ಧೂರಿಯಾಗಿ ಆಚರಿಸಿತು. ಈ ಕಾರ್ಯಕ್ರಮದಲ್ಲಿ ಚಾಪ್ಟರ್‌ನ ಸದಸ್ಯರ ಗಮನಾರ್ಹ ಸಾಧನೆಗಳನ್ನು ಗುರುತಿಸಿ ಗೌರವಿಸಲಾಯಿತು.

ಈ ಸಮಾರಂಭವು ಅಧ್ಯಕ್ಷರಾದ ಡಾ. ಸೈಯದ್ ಮೊಹಮ್ಮದ್ ಫೈಜ್, ಉಪಾಧ್ಯಕ್ಷರಾದ ಕೆ ಅಶ್ವಥ್ ರಾಯ್  ಮತ್ತು ಕಾರ್ಯದರ್ಶಿ/ಖಜಾಂಚಿ ಪ್ರಶ್ನಿತಾ ಶೆಟ್ಟಿ ಅವರ ನೇತೃತ್ವದಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಎಕ್ಸಿಕ್ಯೂಟಿವ್ ಡೈರೆಕ್ಟರ್ ಗಣೇಶ ಎನ್. ಶರ್ಮಾ, ಸೀನಿಯರ್ ಡೈರೆಕ್ಟರ್ ಕನ್ಸಲ್ಟೆಂಟ್ ಪ್ರಹ್ಲಾದ್ ನಾಯಕ್ ಮತ್ತು ಸಪೋರ್ಟ್ ಡೈರೆಕ್ಟರ್ ಕನ್ಸಲ್ಟೆಂಟ್  ಸಮೀರ್ ಮೊಹಮ್ಮದ್  ಉಪಸ್ಥಿತರಿದ್ದರು.

ಅತ್ಯುತ್ತಮ ಸಾಧಕರಿಗೆ ಪ್ರಶಸ್ತಿ ಗೌರವ ಸಂಘಟನೆಯ ಬೆಳವಣಿಗೆಗೆ ಶ್ರಮಿಸಿದ ಮತ್ತು ವ್ಯವಹಾರದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಉದಯ್ ಕೆ. ಶೆಟ್ಟಿ (ತುಳುನಾಡು ಪ್ರಾಪರ್ಟೀಸ್), ಲತಾ ಸುವರ್ಣ (ಸೆವೆನ್ ಹಿಲ್ಸ್ ಕನ್ಸ್ಟ್ರಕ್ಷನ್ ಅಂಡ್ ಮ್ಯಾನೇಜ್ಮೆಂಟ್), ರಯಾನ್ ಕ್ರಿಸ್ಟ್ ಡಿಸೋಜಾ (ಕ್ರಿಸ್ಟ್ ಎಕ್ಸ್ ಮಾರ್ಕೆಟಿಂಗ್), ಶ್ವೇತಾ ಬಂಗೇರ (ಬ್ಲಾಕ್ ಆರ್ ಗ್ರೇ ಪ್ರೈವೇಟ್ ಲಿಮಿಟೆಡ್), ಪ್ರದೀಪ್ ವಾದಿರಾಜ್ (ಶಕ್ತಿ ಪವರ್ ಅಂಡ್ ಇಂಜಿನಿಯರಿಂಗ್ ಸರ್ವಿಸ್ LLP), ರಂಜಿತ್ ಕುಮಾರ್ ಶೆಟ್ಟಿ (ಶ್ರೀರಾಮ್ ಏಜೆನ್ಸೀಸ್) ಸದಸ್ಯರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಸಂಜೆ ಕೇವಲ ಪ್ರಶಸ್ತಿ ಪ್ರದಾನಕ್ಕೆ ಸೀಮಿತವಾಗದೆ, ಸದಸ್ಯರ ಕುಟುಂಬದವರ ಸಮ್ಮುಖದಲ್ಲಿ ವಿವಿಧ ಮನೋರಂಜನಾ ಆಟಗಳು ಮತ್ತು ಚಟುವಟಿಕೆಗಳೊಂದಿಗೆ ಸಂಭ್ರಮದಿಂದ ಜರುಗಿತು. ಈ ಕಾರ್ಯಕ್ರಮವು ಬಿಎನ್‌ಐ ವೃದ್ಧಿ ಚಾಪ್ಟರ್‌ನ ಒಗ್ಗಟ್ಟು ಮತ್ತು ಮುಂದಿನ ಅವಧಿಯ ಯಶಸ್ಸಿನ ಉತ್ಸಾಹವನ್ನು ಪ್ರತಿಬಿಂಬಿಸಿತು.

LEAVE A REPLY

Please enter your comment!
Please enter your name here