ಶ್ರೀ ಬಬ್ಬುಸ್ವಾಮಿ ದೇವಸ್ಥಾನ (ಪಡುಪಾಲು) ಅಂಬಲಪಾಡಿ : ಶ್ರೀ ಕಂಬಿಗಾರ ದೈವದ ನೂತನ ಗುಡಿಯ ಪುನರ್ ಪ್ರತಿಷ್ಠೆ

0
43

ಶ್ರೀ ಬಬ್ಬುಸ್ವಾಮಿ ದೇವಸ್ಥಾನ (ಪಡುಪಾಲು) ಅಂಬಲಪಾಡಿ ಇದರ ಶ್ರೀ ಕಂಬಿಗಾರ ದೈವದ ನೂತನ ಗುಡಿಯ ಪುನರ್ ಪ್ರತಿಷ್ಠೆಯು ದೈವಸ್ಥಾನದ ನೇಮೋತ್ಸವ ಸಮಿತಿಯ ಅಧ್ಯಕ್ಷ ಪಠೇಲರ ಮನೆ ಎ.ಜಯಕರ ಶೆಟ್ಟಿ ಅವರ ನೇತೃತ್ವದಲ್ಲಿ ನಡೆಯಿತು.

ಶ್ರೀ ಕಂಬಿಗಾರ ದೈವದ ಪುನರ್ ಪ್ರತಿಷ್ಠಾ ಧಾರ್ಮಿಕ ವಿಧಿ ವಿಧಾನಗಳನ್ನು ವೇದಮೂರ್ತಿ ಪುತ್ತೂರು ಉದಯ ತಂತ್ರಿ ಅವರು ನೆರವೇರಿಸಿದರು.

ಬಳಿಕ ಶ್ರೀ ಕಂಬಿಗಾರ ಮತ್ತು ಶ್ರೀ ಬಬ್ಬುಸ್ವಾಮಿ ದೈವಗಳ ದರ್ಶನ ಸೇವೆ ನಡೆಯಿತು.

ಈ ಸಂದರ್ಭದಲ್ಲಿ ದೈವಸ್ಥಾನದ ನೇಮೋತ್ಸವ ಸಮಿತಿಯ ಗೌರವಾಧ್ಯಕ್ಷ, ಅಂಬಲಪಾಡಿ ಜನಾರ್ಧನ ಮತ್ತು ಮಹಾಕಾಳಿ ದೇವಸ್ಥಾನದ ಧರ್ಮದರ್ಶಿ ಡಾ! ನಿ.ಬೀ. ವಿಜಯ ಬಲ್ಲಾಳ್ ಹಾಗೂ ನೇಮೋತ್ಸವ ಸಮಿತಿಯ ಪದಾಧಿಕಾರಿಗಳು, ಸಮಿತಿ ಸದಸ್ಯರು, ಹತ್ತು ಸಮಸ್ತರ ಗುರಿಕಾರರು, ಅರ್ಚಕರು, ಹತ್ತು ಸಮಸ್ತರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here