ಕರಡಿ ದಾಳಿ – ರೈತನಿಗೆ ತೀವ್ರ ಗಾಯ

0
54

ಹೊಸಪೇಟೆ : ಹೊಲದಲ್ಲಿ ಕೆಲಸ ಮಾಡುವಾಗ ಏಕಾಏಕಿಯಾಗಿ ಕರಡಿ ರೈತನ ಮೇಲೆ ದಾಳಿ ನಡೆಸಿ, ಗಾಯಗೊಳಿಸಿದ ಘಟನೆ ತಾಲೂಕಿನ ಬುಕ್ಕಸಾಗರ ಗ್ರಾಮದಲ್ಲಿ ಸಂಭವಿಸಿದೆ. ದೆ. ಬುಕ್ಕಸಾಗರದ ಗ್ರಾಮದ ನಿವಾಸಿ ರಾಜಶೇಖರ್ ಗೌಡ (45) ಎಂಬ ರೈತ ಗಾಯಗೊಂಡಿರುವ ವ್ಯಕ್ತಿಯಾಗಿದ್ದಾನೆ.

ಗಾಯಗೊಂಡಿರುವ ವ್ಯಕ್ತಿಯು ಹೊಸಪೇಟೆ 100 ಹಾಸಿಗೆ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೊಲದಲ್ಲಿ ಬೆಳೆಗೆ ನೀರು ಕಟ್ಟುವಾಗ ಏಕಾಏಕಿ ಕರಡಿ ರೈತನ ಮೇಲೆ ದಾಳಿ ನಡೆಸಿದ್ದು, ರಾಜಶೇಖರ್ ನ ಬಲ ಗೈ ಹಾಗೂ ಕಾಲಿಗೆ ಪರಚಿ ಗಾಯಗೊಳಿಸಿದೆ. ಜೀವಕ್ಕೆ ಯಾವುದೇ ತೊಂದರೆಯಿಲ್ಲ ಎಂದು ವೈದ್ಯರು ಮಾಹಿತಿ ನೀಡಿದರು.

ಇತ್ತೀಚಿಗೆ ತಾಲೂಕಿನ ಮಲಪನಗುಡಿ ಹಾಗೂ ಕೊಂಡನಾಯಕನಹಳ್ಳಿ ಪ್ರದೇಶದಲ್ಲಿ ಕೆಲ ದಿನಗಳಿಂದ ನಿರಂತವಾಗಿ ಕರಡಿ ಕಾಣಿಸಿಕೊಳ್ಳುತ್ತಿತ್ತು. ಈ ನಡುವೆ ಬುಕ್ಕಸಾಗರದಲ್ಲಿ ಕರಡಿ ದಾಳಿ ನಡೆಸಿದ್ದರಿಂದ ಈ ಭಾಗದ ರೈತರಲ್ಲಿ ಸಹಜವಾಗಿಯೇ ಆತಂಕ ಮೂಡಿಸಿದೆ.

ಇತ್ತೀಚಿಗೆ ತಾಲೂಕಿನ ವೆಂಕಟಾಪುರ ಗ್ರಾಮದಲ್ಲಿ ಬೆಳಿಗಿನ‌ಜಾವ ವಾಯುವಿಹಾರಕ್ಕೆ ತೆರಳಿಸ ವ್ಯಕ್ತಿಯ ಮೇಲೆ ಕರಡಿಯೊಂದು ದಾಳಿ‌ ನಡೆಸಿ, ತೀವ್ರ ಸ್ವರೂಪದ ಗಾಯಗಳಾಗಿ ಆ ವ್ಯಕ್ತಿಗೆ ಶಸ್ತ್ರಚಿಕಿತ್ಸೆ ಸಹ ನಡೆದಿದೆ. ಇನ್ನೂ ಚಿಕಿತ್ಸೆ ನಡೆಯುತ್ತಿರುವಾಗ ಈಗ ಮತ್ತೊಂದು ಘಟನೆ ರೈತನ ಮೇಲೆ ಕರಡಿ ದಾಳಿ‌ನಡೆಸಿರುವು ತಾಲೂಕಿನ‌ ಜನರು ಭಯಭೀತರಾಗಿದ್ದಾರೆ. ತಕ್ಷಣವೇ ಕರಡಿಗಳನ್ಮು ಬಂದಿಸಿ, ಜನರನ್ನು ರಕ್ಷಿಸಿ ಎಂದು ಸಾರ್ವಸನಿಕರು ಅರಣ್ಯ ಇಲಾಖೆಯ ಅಧಿಕಾರಿಗಳಲ್ಲಿ ಮನವಿ ಮಾಡಿಕೊಂಡ್ಡಿದ್ದಾರೆ.

LEAVE A REPLY

Please enter your comment!
Please enter your name here