ಭಾರತ ಜನಗಣತಿ 2027 ರ ಹಂತ 1 ರ ಜನಗಣತಿಗೆ ವೀರಕಂಭ ಗ್ರಾಮ ಸರ್ಕಲ್ ನಂಬರ್ 073 ರಲ್ಲಿ ಚಾಲನೆ

0
17

ಕಲ್ಲಡ್ಕ : ಭಾರತ ಜನಗಣತಿ 2027 ರ ಹಂತ 1 ರ ಜನಗಣತಿಗೆ ವೀರಕಂಭ ಗ್ರಾಮ ಸರ್ಕಲ್ ನಂಬರ್ 073 ರಲ್ಲಿ ದಿನಾಂಕ: 16. 04.2026 ರಂದು ಚಾಲನೆ ನೀಡಲಾಯಿತು.

ದೇಶದ ಭವಿಷ್ಯದ ನೀತಿ ನಿರೂಪಣೆಗೆ – ಸಮಗ್ರ ಅಭಿವೃದ್ಧಿ ಗೆ ಜನಗಣತಿ ಅಂಕಿ ಅಂಶಗಳು ನಿರ್ಣಾಯಕರಾಗಿರುವುದರಿಂದ ಜನಗಣತಿಯ ಪ್ರಾಮುಖ್ಯತೆ – ಗಣತಿದಾರರ ಕರ್ತವ್ಯ, ಜವಾಬ್ದಾರಿಗಳ ಬಗ್ಗೆ ಗಣತಿ ಮೇಲ್ವಿಚಾರಕರಾದ ವೀರಕಂಭ ಗ್ರಾಮ ಪಂಚಾಯತ್ ಪಿ. ಡಿ. ಒ ಶಂಭು ಕುಮಾರ ಶರ್ಮಾ ಇವರು ಗಣತಿದಾರರಿಗೆ ತಿಳಿಸಿ ಹೇಳಿದರು. ಸರ್ಕಲ್ 073 ರ ಆರು ಬ್ಲಾಕ್ ಗಳ ಎಲ್ಲಾ 6 ಮಂದಿ ಗಣತಿದಾರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ವೀರಕಂಭ ಗ್ರಾಮದಲ್ಲಿ ಒಟ್ಟು 10 ಬ್ಲಾಕ್ ಗಳಿದ್ದು, ಸುಮಾರು 200 ಮನೆಗಳಿಗೆ ಒಂದು ಬ್ಲಾಕ್ ನಂತೆ ವಿಂಗಡಿಸಿ ಜಿಯೋ ಪೆನ್ಸಿಂಗ್ ಮುಖಾಂತರ ಬ್ಲಾಕ್ ಗಳನ್ನು ರಚಿಸಲಾಗಿದ್ದು, ಪ್ರತಿ ಬ್ಲಾಕ್ ಗೆ ಒಬ್ಬರಂತೆ ಗಣತಿ ಕರ್ತವ್ಯಕ್ಕೆ ನೇಮಿಸಲಾಗಿರುತ್ತದೆ. ಸುಮಾರು ಒಂದು ತಿಂಗಳು ಹಂತ ಒಂದರ ಜನತಿ ಪ್ರಕ್ರಿಯೆಯು ನಡೆಯಲಿರುತ್ತದೆ.

LEAVE A REPLY

Please enter your comment!
Please enter your name here