ಏ.18-19 : ಅಂಬಲಪಾಡಿ ಪಡುಪಾಲು ಶ್ರೀ ಬಬ್ಬುಸ್ವಾಮಿ ಹಾಗೂ ಪರಿವಾರ ದೈವಗಳ ನೇಮೋತ್ಸವ

0
22

ಶ್ರೀ ಬಬ್ಬುಸ್ವಾಮಿ ದೈವಸ್ಥಾನ (ಪಡುಪಾಲು) ಅಂಬಲಪಾಡಿ ಇದರ ನೇಮೋತ್ಸವ ಸಮಿತಿಯ ವತಿಯಿಂದ ಸಮಿತಿಯ ಅಧ್ಯಕ್ಷ ಪಠೇಲರ ಮನೆ ಎ.ಜಯಕರ ಶೆಟ್ಟಿ ಅಂಬಲಪಾಡಿ ಅವರ ನೇತೃತ್ವದಲ್ಲಿ ಗೌರವಾಧ್ಯಕ್ಷ ಡಾ! ನಿ.ಬೀ. ವಿಜಯ ಬಲ್ಲಾಳ್ ಅಂಬಲಪಾಡಿ ಅವರ ಮಾರ್ಗದರ್ಶನದಲ್ಲಿ ಶ್ರೀ ಬಬ್ಬುಸ್ವಾಮಿ ಹಾಗೂ ಪರಿವಾರ ದೈವಗಳ ನೇಮೋತ್ಸವವು ಏಪ್ರಿಲ್ 18 ಶನಿವಾರ ಮತ್ತು ಏಪ್ರಿಲ್ 19 ರವಿವಾರ ಗ್ರಾಮಸ್ಥರ, ಹತ್ತು ಸಮಸ್ತರ ಹಾಗೂ ಊರ-ಪರವೂರ ಭಕ್ತಾಭಿಮಾನಿಗಳ ಸೇವೆಯಾಗಿ ಅಂಬಲಪಾಡಿ ಬಂಕೇರಕಟ್ಟದಲ್ಲಿ ನಡೆಯಲಿದೆ ಎಂದು ನೇಮೋತ್ಸವ ಸಮಿತಿಯ ಗೌ! ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ಅಂಬಲಪಾಡಿ ತಿಳಿಸಿದ್ದಾರೆ.

ಏಪ್ರಿಲ್ 18ರ ಬೆಳಿಗ್ಗೆ ಗಂಟೆ 7.30ಕ್ಕೆ ಮಹಾ ಚಪ್ಪರದ ಗಜಕಂಬ ಪ್ರತಿಷ್ಠೆ, ಮಧ್ಯಾಹ್ನ ಗಂಟೆ 12.00ಕ್ಕೆ ಮಹಾ ಚಪ್ಪರದ ಆರೋಹಣ ಹಾಗೂ ಮಧ್ಯಾಹ್ನ ಗಂಟೆ 12.30ಕ್ಕೆ ನೇಮೋತ್ಸವ ಚಪ್ಪರದ ಬಳಿ ಸಾರ್ವಜನಿಕ ಮಹಾ ಅನ್ನಸಂತರ್ಪಣೆ ನಡೆಯಲಿದೆ.

ಸಂಜೆ ಗಂಟೆ 4.00ಕ್ಕೆ ದೈವಸ್ಥಾನದಲ್ಲಿ ಮಹಾಪೂಜೆ ಮತ್ತು ಶ್ರೀ ದೈವಗಳ ದರ್ಶನ ಸೇವೆ ನಡೆಯಲಿದೆ. ಸಂಜೆ ಗಂಟೆ 5.00ಕ್ಕೆ ದೈವಸ್ಥಾನದಿಂದ ಮಹಾಚಪ್ಪರಕ್ಕೆ ಮುಖಮೂರ್ತಿ ಬಂಡಾರಗಳ ಮೆರವಣಿಗೆ ಹೊರಡಲಿದೆ. ರಾತ್ರಿ ಗಂಟೆ 9.00ರಿಂದ ಶ್ರೀ ಬಬ್ಬುಸ್ವಾಮಿಯ ನೇಮ ಹಾಗೂ ರಾತ್ರಿ ಗಂಟೆ 12.00ಕ್ಕೆ ತನ್ನಿಮಾನಿಗ ದೇವಿಯ ನೇಮ ನಡೆಯಲಿದೆ.

ಏಪ್ರಿಲ್ 19 ರವಿವಾರ ಬೆಳಿಗ್ಗೆ ಗಂಟೆ 9.00ಕ್ಕೆ ಶ್ರೀ ಧೂಮಾವತಿ ಬಂಟ ದೈವಗಳ ನೇಮ, ಮಧ್ಯಾಹ್ನ ಗಂಟೆ 12.00ರಿಂದ ಶ್ರೀ ಮಹಾ ಗುಳಿಗದ್ವಯ ದೈವಗಳ ನೇಮ, ಸಂಜೆ ಗಂಟೆ 4.00ರಿಂದ ಶ್ರೀ ಕೊರಗಜ್ಜ ದೈವದ ನೇಮ ಹಾಗೂ ಸಂಜೆ ಗಂಟೆ 5.00ಕ್ಕೆ ಪ್ರಸಾದ ವಿತರಣೆ ನಡೆಯಲಿದೆ.

ಈ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳಿಗೆ ಊರ-ಪರವೂರ ಭಕ್ತಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಸಿರಿಮುಡಿ ಗಂಧ ಪ್ರಸಾದವನ್ನು ಸ್ವೀಕರಿಸಿ, ಶ್ರೀ ಬಬ್ಬುಸ್ಬಾಮಿ ಹಾಗೂ ಪರಿವಾರ ದೈವಗಳ ಕೃಪೆಗೆ ಪಾತ್ರರಾಗಬೇಕಾಗಿ ನೇಮೋತ್ಸವ ಸಮಿತಿ, ಗ್ರಾಮಸ್ಥರು, ಗುರಿಕಾರರು ಮತ್ತು ಹತ್ತು ಸಮಸ್ತರ ಪರವಾಗಿ ಸಮಿತಿಯ ಗೌ! ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ಅಂಬಲಪಾಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here