ಮೂಡುಬಿದಿರೆ : ನಿನ್ನೆ ರಾತ್ರಿ ಸಿಡಿಲು ಮಳೆಗೆ ಮೂಡಬಿದಿರೆಯ ಹೃದಯ ಭಾಗದಲ್ಲಿರುವ ಟೆಲಿಪೋನ್ ಬೀಡಿ ರಸ್ತೆಯ ಶಶಿಧರ ರಾವ್ ಅವರ ವಿಜಯ ನಿವಾಸ ಮನೆಗೆ ಸಿಡಿಲು ಬಡಿದಿದ್ದು, ಮನೆಯ ಕಾಂಕ್ರೀಟ್ ಮೇಲ್ ಛಾವಣಿ ಹಾನಿಯಾಗಿದೆ.

ಮನೆಯ ಬಲಭಾಗದ ತೆಂಗಿನ ಮರ ಸುಟ್ಟು ಹೋಗಿದ್ದು ಮನೆಯ ಇನ್ವೆರ್ಟರ್ ಮತ್ತು 2 ಪ್ಯಾನ್ ಸೇರಿ ಹಲವಾರು ವಿದ್ಯುತ್ ಉಪಕರಣಗಳು ಹಾನಿಗೊಳಗಾಗಿದೆ.

