ದಾವಣಗೆರೆ : ಚಿತ್ರದುರ್ಗ ಜಿಲ್ಲೆಯ ಕುರುಬರಹಳ್ಳಿಯ ಖ್ಯಾತ ಹಿರಿಯ ಜನಪದ ಕಲಾವಿದರು, ಸೂಬಾನ ಪದಗಳು ಭಜನೆ, ತತ್ವ ಪದಗಳನ್ನು ಕಳೆದ 50 ವರ್ಷಗಳಿಂದ ನಿರಂತರವಾಗಿ ಕಠಿಣ ಪರಿಶ್ರಮದಿಂದ ಚಿತ್ರದುರ್ಗ, ಭದ್ರಾವತಿ ಆಕಾಶವಾಣಿಗಳಲ್ಲೂ ಜತೆಗೆ ತಮ್ಮ ಪ್ರತಿಭೆಗಳನ್ನು ವ್ಯಕ್ತಪಡಿಸಿ, ಶರಣ ಸಂಸ್ಕೃತಿ ಉತ್ಸವ, ಶಿವರಾತ್ರಿ ಉತ್ಸವ, ಸಿರಿಗೆರೆ ತರಳಬಾಳು ಹುಣ್ಣಿಮೆ, ಹುಬ್ಬಳ್ಳಿಯ ಸಿದ್ದರೂಢ ಮಠದಲ್ಲಿ ಭಜನೆಯೊಂದಿಗೆ ಮಧುರ ಧ್ವನಿಯೊಂದಿಗೆ ಗಾಯನ ಮಾಡುತ್ತಿರವ ಇವರ ಸಾಧನೆಗಳನ್ನು ಗುರುತಿಸಿ ನಾಗಮ್ಮನವರಿಗೆ ಸಾಲಿಗ್ರಾಮದ ಸರಸ್ವತಿ ದಾಸಪ್ಪ ಶೆಣೈ ಪ್ರತಿಷ್ಠಾನ ಮತ್ತು ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ಕೊಡ ಮಾಡುವ “ಸರಸ್ವತಿ ಕನ್ನಡ ರತ್ನ” ರಾಜ್ಯ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಸಂಸ್ಥೆಗಳ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ ಶೆಣೈ ಅವರು ತಿಳಿಸಿದ್ದಾರೆ.
ದಾವಣಗೆರೆಯ ಚನ್ನಗಿರಿ ವಿರೂಪಾಕ್ಷಪ್ಪ ಕಲ್ಯಾಣ ಮಂಟಪದಲ್ಲಿ ಏಪ್ರಿಲ್ 19 ರಂದು ಭಾನುವಾರ ಅದ್ದೂರಿಯಾಗಿ, ವೈಭವಪೂರ್ಣವಾಗಿ ವಿಜೃಂಭಣೆಯಿAದ ಸನ್ಮಾನ ಮಾಡಲಾಗುವುದು ಎಂದು ಸಂಸ್ಥೆಗಳ ಸರ್ವ ಸದಸ್ಯರು, ಪದಾಧಿಕಾರಿಗಳು, ಅಭಿಮಾನದಿಂದ ಅಭಿನಂದಿಸಿ ಶುಭ ಹಾರೈಸಿದ್ದಾರೆ.

