ಮಂಗಳೂರಿನ ಹೋಟೆಲ್‌ಗೂ ಬಂತು ರೋಬೋ ವೈಟರ್..!

0
62

ಮಂಗಳೂರು: ಆಧುನಿಕ ಜಗತ್ತಿನಲ್ಲಿ ತಂತ್ರಜ್ಞಾನ ಆಧಾರಿತ ಬದಲಾವಣೆಗಳ ಅನುಷ್ಠಾನ ಶೀಘ್ರಗತಿಯಲ್ಲಿ ಆಗುತ್ತಿದೆ. ಅದರಂತೆ ಕರಾವಳಿ ಕರ್ನಾಟಕದಲ್ಲೇ ಮೊದಲು ಎಂಬಂತೆ ಮಂಗಳೂರಿನ ಹೊಟೇಲೊಂದರಲ್ಲಿ ರೋಬೋ ವೈಟರ್ ಕಾರ್ಯಾಚರಿಸುತ್ತಿದೆ. ಮಂಗಳೂರು ನಗರದ ಕೆ.ಎಸ್.ರಾವ್ ರಸ್ತೆಯ ‘ಪಾಕಶಾಲ’ ಹೆಸರಿನ ಹೋಟೆಲ್‌ನಲ್ಲಿ ರೋಬೋ ವೈಟರ್ (ಸಪ್ಲಯರ್) ಸೇವೆ ಪರಿಚಯಿಸಲಾಗಿದೆ.

ತುಳುನಾಡಿನ ಮೊದಲ ರೋಬೋ ವೈಟರ್ ಆಗಿದ್ದು, ಗ್ರಾಹಕರಿಗೆ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ. ಮೂರು ಲಕ್ಷ ರು. ವೆಚ್ಚದ ಜಪಾನ್ ಮೂಲದ ರೋಟೋ ವೈಟರ್ ಸೆನ್ಸಾರ್ ಆಧಾರಿತವಾಗಿ ಕಾರ್ಯಾಚರಿಸುತ್ತದೆ. ಇದರಲ್ಲಿ ನಾಲ್ಕುರ್‍ಯಾಕ್‌ ಗಳಿದ್ದು, ಕಿರಿದಾದ ಚಕ್ರಗಳ ಸಹಾಯದಿಂದ ಚಲಿಸುತ್ತದೆ. ರೋಬೋ ಮುಂಭಾಗದಲ್ಲಿ ಸ್ಕ್ರೀನ್ ಇದ್ದು, ಅದರಲ್ಲಿ ಟೇಬಲ್ ವಿವರ ಇರುತ್ತದೆ. ಹೋಟೆಲ್‌ನಲ್ಲಿನ 35 ಟೇಬಲ್‌ಗಳಿಗೆ ರೂಟ್‌ ಮಾರ್ಕ್, ಟೇಬಲ್‌ ಮಾರ್ಕ್ ಮಾಡಲಾಗಿದೆ.

ಅದರಂತೆ ಯಾವ ಟೇಬಲ್‌ಗೆ ಆಹಾರ ಪದಾರ್ಥ ರವಾನೆಯಾಗಬೇಕು ಎಂಬುದನ್ನು ರೋಬೋಗೆ ಕ್ಲಿಕ್ಕಿಸಿದಲ್ಲಿ (ಸಂಖ್ಯೆ ಒತ್ತಿದರೆ) ಆ ಟೇಬಲ್‌ಗೆ ರೋಬೋ ತಿನಿಸನ್ನು ತಲುಪಿಸುತ್ತದೆ. ಇದರಲ್ಲಿ 15ರಿಂದ 20 ಊಟ/ತಿನಿಸುಗಳನ್ನು ಏಕ ಕಾಲದಲ್ಲಿ ಸಾಗಿಸಬಹುದು. ಗ್ರಾಹಕರಿಗೆ ಸಪ್ಲೈ ಮಾಡುವ ಆಹಾರವನ್ನು ರೋಬೋದ ರ್‍ಯಾಕ್‌ನಲ್ಲಿ ಇಟ್ಟು, ಫುಡ್ ಮೋಡ್ ಅಥವಾ ಸೂಪ್ ಮೋಡ್‌ನಲ್ಲಿ ಕ್ಲಿಕ್ಕಿಸಿ ರವಾನಿಸಲಾಗುತ್ತದೆ.

LEAVE A REPLY

Please enter your comment!
Please enter your name here