ಕಾಸರಗೋಡು : ಡಾ. ವಾಮನ್ ರಾವ್ ಬೇಕಲ್ -ಸಂಧ್ಯಾ ರಾಣಿ ಟೀಚರ್ ಸಾರತ್ಯದ ಗಡಿನಾಡಿನ ಹೆಮ್ಮೆಯ ಕನ್ನಡ ಸಂಸ್ಥೆಯಾದ ಕನ್ನಡ ಭವನದ ಅಂಗ ಸಂಸ್ಥೆಯಾದ ಕನ್ನಡ ಭವನ ಪ್ರಕಾಶನದ 3ನೇ ವಾರ್ಷಿಕೋತ್ಸವ ಸಂಭ್ರಮ 22.4.2026.ಸಂಜೆ ಅರ್ಥಪೂರ್ಣವಾಗಿ ಕನ್ನಡ ಭವನ ಗ್ರಂಥಾಲಯ ವೇದಿಕೆಯಲ್ಲಿ ನಡೆಯಿತು.
ಧಾರ್ಮಿಕ ರತ್ನ, ಕನ್ನಡ ಭವನ ನಿರ್ದೇಶಕ ಡಾ. ವೆಂಕಟ್ರಮಣ ಹೊಳ್ಳ ಕಾರ್ಯಕ್ರಮ ಉದ್ಘಾಟಿಸಿದರು. ರಾಮರಾಜ ಕ್ಷತ್ರಿಯ ಯಾನೆ ಕೋಟೆಯಾರ್ ಸೇವಾಸಂಘ ಜಿಲ್ಲಾಧ್ಯಕ್ಷರಾದ ಪತ್ರಕರ್ತ ಪ್ರದೀಪ್ ಬೇಕಲ್ ಅದ್ಯಕ್ಷತೆಯಲ್ಲಿ,ಪುಸ್ತಕ ಬಿಡುಗಡೆ, “ಭರವಸೆಯ ಭಾರತ ರತ್ನ “ಪ್ರಶಸ್ತಿ ಪ್ರದಾನ, ಕವಿತಾ ವಾಚನ -ಗಾಯನ ಕಾರ್ಯಕ್ರಮ ಸಂಭ್ರಮ ನಡೆಯಿತು.
ವೈದ್ಯಕೀಯ ಶಿಕ್ಷಣದಲ್ಲಿ ಅಪ್ರತಿಮ ಸಾಧನೆ ಗೈಯುತ್ತಿರುವ ಡಾ. ಸಚಿನ್ ಬೇಕಲ್, ಅನಂಗೂರ್, ಹಾಗೂ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಶೈಕ್ಷಣಿಕ, ಔದ್ಯೋಗಿಕ ಸಾಧನೆ ಗೈಯುತ್ತಿರುವ, ದಯಾವತಿ ಮಂಗಳೂರು ಇವರೀಗೆ “ಭರವಸೆಯ ಭಾರತ ರತ್ನ ಪ್ರಶಸ್ತಿ “2026. ಕನ್ನಡ ಭವನದ ರೂವಾರಿಗಳಾದ ಡಾ. ಬೇಕಲ್ -ಸಂಧ್ಯಾ ರಾಣಿ ನೀಡಿ ಗೌರವಿಸಿದರು.
ಖ್ಯಾತ ಲೇಖಕಿ, ಕವಯತ್ರಿ ರೇಖಾ ಸುದೇಶ್ ರಾವ್ ಇವರ ಯಾತ್ರಾ ವಿವರಣೆ ಕೃತಿ “ಶರದಿಯಾಚೆ ಪ್ರ ಪ್ರಥಮ ಹೆಜ್ಜೆ “ಕೃತಿ ಕನ್ನಡ ಭವನ ಗೌರವ ಅಧ್ಯಕ್ಷರಾದ ಲೇಖಕ ಪ್ರದೀಪ್ ಬೇಕಲ್ ಬಿಡುಗಡೆ ಗೊಳಿಸಿದರು. ಬೆಂಗಳೂರಿನ ಕವಯತ್ರಿ ಲಕ್ಷ್ಮಿ. ಎಸ್. ಇವರ ಕವನ ಸಂಕಲನ “ಅಂತರ್ಧ್ವನಿ ” ಸಾಹಿತಿ ರೇಖಾ ಸುದೇಶ್ ರಾವ್ ಮಂಗಳೂರು ಬಿಡುಗಡೆ ಗೊಳಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕಾಸರಗೋಡು ನಗರ ಸಭಾ ಸದಸ್ಯೆಯರಾದ ಸುಧಾ ರಾಣಿ ಅನಂಗೂರ್, ದಿವ್ಯಾ ಸಂದೀಪ್ ನಾಗರಕಟ್ಟೆ, ಕೆ. ಕಮಲಾಕ್ಷ ಅನಂಗೂರ್, ರಾ. ರಾ. ಕ್ಷತ್ರಿಯ ಕಾಸರಗೋಡು ಅಧ್ಯಕ್ಷ ವಿದ್ಯಾನಂದ ಹೂಡೆ, ರಾ. ರಾ. ಕ್ಷತ್ರಿಯ ಜಿಲ್ಲಾ ಮಹಿಳಾ ಸಂಘ ಗೌರವಾಧ್ಯಕ್ಷೆ ಆಶಾ ರಾಧಾಕೃಷ್ಣ, ಕಾರ್ಯದರ್ಶಿ ಉಶಾಕಿರಣ್, ಯುವ ಸಂಘ ಅಧ್ಯಕ್ಷ ಮುರಳಿ ಪರಕಟ್ಟಾ, ಪಾಂಗೋಡು ನವೀನ್ ನಾಯ್ಕ್ ಭಾಗವಹಿಸಿದರು.
ಕವಿಗೋಷ್ಠಿ, ಗಾಯನದಲ್ಲಿ ರೇಖಾ ರೋಷನ್, ಸಾಕ್ಷಿ, ಮೋಕ್ಷ, ರೇಖಾ ಸುದೇಶ್ ರಾವ್, ಉಷಾ ಕಿರಣ್, ದಿವ್ಯ ಕೆರೆಮನೆ, ವಸಂತ್ ಕೆರೆಮನೆ, ಕು. ಚೈತಾಲಿ ಮುಂತಾದವರು ಭಾಗವಹಿಸಿದರು. ದಿವ್ಯ ಕೆರೆಮನೆ ಪ್ರಾರ್ಥಿಸಿದರು, ಕನ್ನಡ ಭವನ ಕಾರ್ಯದರ್ಶಿ ವಸಂತ್ ಕೆರೆಮನೆ ಸ್ವಾಗತಿಸಿ, ರಾಜೇಶ್ ಕೋಟೆಕಣಿ ಧನ್ಯವಾದವಿತ್ತರು.ರೇಖಾ ಸುದೇಶ್ ರಾವ್ -ಉಷಾ ಕಿರಣ್ ನಿರ್ವಹಣೆ ಗೈದರು.

