ದಾವಣಗೆರೆ : ಈಗಿನ ಕೆಲವು ಯುವಕ, ಯುವತಿಯರಿಗೆ ಸಂಸ್ಕಾರ, ಸಂಸ್ಕೃತಿ ಇಲ್ಲದಿರುವುದು ವಿಷಾದದ ಸಂಗತಿ. ತಂದೆ-ತಾಯಿ, ಅತ್ತೆ-ಮಾವನವರನ್ನು ಗೌರವಿಸುವುದು ಅವರಿಗೆ ಮಾನ್ಯತೆ ಕೊಟ್ಟರೆ ಅವರ ಜೀವನಕ್ಕೆ ಸಾರ್ಥಕತೆ ಬರುತ್ತದೆ. ಚಿತ್ರದುರ್ಗ ಜಿಲ್ಲೆಯ ಭರಮಸಾಗರದ ಪವಮಾನ ಪ್ರತಿಷ್ಠಾನದಿಂದ ಹಿರಿಯ ಚೇತನ ದಂಪತಿಗಳಿಗೆ “ಆದರ್ಶ ದಂಪತಿ” ಪುರಸ್ಕರಿಸಿ ಸನ್ಮಾನಿಸುವುದು ಅಪರೂಪ.
ಆದರ್ಶ ದಂಪತಿಗಳಿಗೆ ಮುಂದಿನ ಭವ್ಯ-ದಿವ್ಯ ಭವಿಷ್ಯಕ್ಕೆ ನಾಂದಿ, ವಯಸ್ಸು ಮೀರಿದ ದಂಪತಿಗಳಿಗೆ ಈ ಸನ್ಮಾನದ ಸಮಾರಂಭ ತುಂಬಾ ತುಂಬಾ ಸಂತೋಷವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು ಎಂದು ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್‌ಶೆಣೈ ಯವರು ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಭರಮಸಾಗರದ ವಾಣಿ ನಿವಾಸ ಸಭಾಂಗಣದಲ್ಲಿ ಅತ್ಯದ್ಭುತ, ವಿಜೃಂಭಣೆಯ ಈ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ಜಿಲ್ಲಾ ವೀರಶೈವ ಸಮಾಜದ ಅಧ್ಯಕ್ಷರಾದ ಹೆಚ್.ಎಂ.ತಿಪ್ಪೇಸ್ವಾಮಿಯವರು ಮಾತನಾಡಿ, ಯಾವ ಸಂಘ-ಸAಸ್ಥೆಗಳು ಮಾಡದ ಈ ದಂಪತಿಗಳಿಗೆ ಸನ್ಮಾನ ಮಾಡುತ್ತಿರುವುದು ಪ್ರತಿಷ್ಠಾನದ ಸಂಸ್ಥಾಪಕರಾದ ಬಿ.ಜೆ.ಅನಂತಪದ್ಮನಾಭರಾವ್‌ರವರ ಕಠಿಣ ಪರಿಶ್ರಮದಿಂದ ನಿರಂತರ ಯಾವುದೇ ಜಾತಿ, ಮತ ಬೇಧವಿಲ್ಲದೇ ಹೊಸ ಹೊಸ ಪರಿಕಲ್ಪನೆಯೊಂದಿಗೆ ನಡೆಸುತ್ತಿರುವುದು ಶ್ಲಾಘನೀಯ ಎಂದರು.
ಮುಖ್ಯ ಅತಿಥಿಗಳಾಗಿ ಡಿವಿಎಸ್ ವಿದ್ಯಾಸಂಸ್ಥೆಯ ಮುಖ್ಯಸ್ಥರಾದ ಡಿ.ಎಸ್.ಪ್ರವೀಣ್‌ಕುಮಾರ್ ಮಾತನಾಡಿ, ಈಗಾಗಲೇ ಈ ಸಂಸ್ಥೆ ಪ್ರಾರಂಭವಾಗಿ 24 ವರ್ಷಗಳು ಆಯಿತು ಮುಂದಿನ ದಿನಮಾನಗಳಲ್ಲಿ ಈ ಸಂಸ್ಥೆಯು ಬೆಳ್ಳಿ ಹಬ್ಬ ನಾವೆಲ್ಲಾ ಸೇರಿ ವಿಜೃಂಭಣೆಯಿಂದ ನಡೆಸುತ್ತೇವೆ. ಹಿರಿಯ ಚೇತನಗಳ ದಂಪತಿಗಳಿಗೆ ಸನ್ಮಾನ ಮಾಡಿದ್ದರಿಂದ ಅವನ ಜೀವನಕ್ಕೆ ಸ್ಪೂರ್ತಿ, ಉತ್ಸಾಹ ಬರುತ್ತದೆ ಎಂದರು. ಪ್ರಾರಂಭದಲ್ಲಿ ಶ್ರೀಮತಿ ಗಾಯತ್ರಿ ಪ್ರಕಾಶ್ಮೂರ್ತಿ ಪ್ರಾರ್ಥನೆ ಮಾಡಿ, ಪ್ರತಿಷ್ಠಾನದ ಸಂಸ್ಥಾಪಕರಾದ ಬಿ.ಜೆ.ಅನಂತಪದ್ಮನಾಭರಾವ್ ಸ್ವಾಗತಿಸಿ, ಪ್ರಾಸ್ತಾವನೆ ಮಾತನಾಡಿದರು. ಬೆಂಗಳೂರಿನ ಜ್ಯೋತಿಷ್ಯ ಮತ್ತು ವಾಸ್ತು ಸಲಹೆಗಾರರಾದ ಮಾಲತಿ ವಿಠಲ್‌ರವರು ಅಚ್ಚುಕಟ್ಟಾಗಿ ನಿರೂಪಣೆ ಮಾಡಿ ಜ್ಯೋತಿಷ್ಯ ಮತ್ತು ವಾಸ್ತುಗಳ ಬಗ್ಗೆ ವಿವರವಾಗಿ ತಿಳಿಸಿದರು.
ಸಮಾರಂಭದ ಮುಂಚಿತವಾಗಿ ಸಾಲಿಗ್ರಾಮ ಗಣೇಶ್‌ಶೆಣೈ ಯವರು ಪ್ರೇಕ್ಷಕರಿಗೆ ಮನರಂಜನೆಗೋಸ್ಕರ ರಾಮಾಯಣ, ಮಹಾಭಾರತದ ಬಗ್ಗೆ ರಸಪ್ರಶ್ನೆಯೊಂದಿಗೆ ನಡೆಸಿದ ಈ ಕಾರ್ಯಕ್ರಮ ಪ್ರೇಕ್ಷಕರು ತಮ್ಮ ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದರು. ಸನ್ಮಾನ ಸ್ವೀಕರಿಸಿದ ದಂಪತಿಗಳು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಬಿ.ವಿ.ಅಂಜನರಾವ್ ವಂದಿಸಿದರು.

