ಸರ್ಕಾರಿ ಪ್ರೌಢಶಾಲೆ ಕೊಯಿಲ ಪ್ರಕೃತಿ ಇಕೋ ಕ್ಲಬ್, NSSಘಟಕ ಹಾಗೂ ರೋಟರಿ ಇಂಟರಾಕ್ಟ್ ಕ್ಲಬ್ ಸಹಯೋಗದೊಂದಿಗೆ ಆಟಿಡೊಂಜಿ ದಿನ ಕಾರ್ಯಕ್ರಮ ನಡೆಯಿತು.
ನಿವೃತ್ತ ಶಿಕ್ಷಕ ಬಾಲಕೃಷ್ಣ ಮುಖ್ಯ ಅತಿಥಿಗಳಾಗಿ ಆಗಮಿಸಿ ಆಟಿ ತಿಂಗಳಿನ ಮಹತ್ವದ ಕುರಿತು ಮಾಹಿತಿ ನೀಡಿದರು.
ಅತಿಥಿಗಳನ್ನು ತಾಂಬೂಲ ನೀಡಿ ಮುಟ್ಟಾಳೆ ಇಟ್ಟು ಸ್ವಾಗತಿಸಲಾಯಿತು. ಚೆನ್ನೆ ಮನೆ ಆಡುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ವಿದ್ಯಾರ್ಥಿಗಳು ಆಟಿ ತಿಂಗಳಿನ ಮಹತ್ವದ ಕುರಿತು ಭಾಷಣ ಮಾಡಿದರು. ತುಳುನಾಡಿನಲ್ಲಿ ಬಳಸುವ ಕೆಲವು ಸಾಂಪ್ರದಾಯಿಕ ಉಪಕರಣಗಳನ್ನು ಪ್ರದರ್ಶಿಸಲಾಯಿತು. ವಿದ್ಯಾರ್ಥಿಗಳಿಂದ ತುಳು ಪಾಡ್ದನ ಮತ್ತು ಜಾನಪದ ನೃತ್ಯ ಕಾರ್ಯಕ್ರಮ ನಡೆಯಿತು.
ವಿದ್ಯಾರ್ಥಿಗಳು ಮನೆಯಲ್ಲಿ ತಯಾರಿಸಿದ ವಿವಿಧ ಬಗೆಯ ಖಾದ್ಯಗಳನ್ನು ಪ್ರದರ್ಶಿಸಿದರು ನಂತರ ಎಲ್ಲರೂ ಸೇರಿ ಸಹಭೋಜನವನ್ನು ಸವಿದರು. ಕಾರ್ಯಕ್ರಮವನ್ನು ಶಾಲಾ ಸಾಂಸ್ಕೃತಿಕ ಮಂತ್ರಿ ಪ್ರಣಮ್ಯ ಕುಲಾಲ್ ಹಾಗೂ ಆಜ್ಞಾ ಜೈನ್ ನಿರ್ವಹಣೆ ಮಾಡಿದರು. ಕಾರ್ತಿಕ್ ಸ್ವಾಗತಿಸಿದರು . ನಿತಿನ್ ವಂದನಾರ್ಪಣೆ ಸಲ್ಲಿಸಿದರು. ವೇದಿಕೆಯಲ್ಲಿ ಮುಖ್ಯ ಶಿಕ್ಷಕಿ ಸೌಜನ್ಯರವರು ಹಾಗೂ ದೈಹಿಕ ಶಿಕ್ಷಣ ಶಿಕ್ಷಕ ಜನಾರ್ದನ ಹಾಗೂ ಶಾಲಾ ನಾಯಕ ಸಂಕೇತ್ ಕುಮಾರ್ ಉಪಸ್ಥಿತರಿದ್ದರು.

