ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರಿಂದ ಮೃತ ದನಗಳ ಅಂತ್ಯಸಂಸ್ಕಾರ

0
1

​ಮೂಡುಬಿದಿರೆ: ಕಾರ್ಕಳದಿಂದ ಮೂಡುಬಿದಿರೆ ಕಡೆಗೆ ಅತಿವೇಗವಾಗಿ ಸಂಚರಿಸುತ್ತಿದ್ದ ಕ್ಯಾಂಟರ್ ಲಾರಿಯೊಂದು ರಸ್ತೆಯಲ್ಲಿದ್ದ ದನಗಳಿಗೆ ಭೀಕರವಾಗಿ ಢಿಕ್ಕಿ ಹೊಡೆದ ಪರಿಣಾಮ, ಎರಡು ದನಗಳು ಸ್ಥಳದಲ್ಲೇ ಮೃತಪಟ್ಟು, ಮತ್ತೊಂದು ದನ ತೀವ್ರವಾಗಿ ಗಾಯಗೊಂಡಿರುವ ಘಟನೆ ಶುಕ್ರವಾರ ಸಂಜೆ ಬನ್ನಡ್ಕ ದೈವಸ್ಥಾನದ ಬಳಿ ಸಂಭವಿಸಿದೆ.
​ಅಪಘಾತದ ರಭಸಕ್ಕೆ ಮೂರೂ ದನಗಳು ರಸ್ತೆಗೆ ಬಿದ್ದಿದ್ದು, ತೀವ್ರ ರಕ್ತಸ್ರಾವದಿಂದ ಎರಡು ದನಗಳು ಅಸಹಾಯಕವಾಗಿ ಪ್ರಾಣ ಬಿಟ್ಟಿವೆ. ಗಂಭೀರವಾಗಿ ಗಾಯಗೊಂಡಿರುವ ಇನ್ನೊಂದು ದನದ ಸ್ಥಿತಿ ಅತ್ಯಂತ ಚಿಂತಾಜನಕವಾಗಿದ್ದು, ಪ್ರಾಣಾಪಾಯದಲ್ಲಿದೆ.
​ಮಾನವೀಯತೆ ಮೆರೆದ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು:
​ವಿಷಯ ತಿಳಿಯುತ್ತಿದ್ದಂತೆಯೇ ತಕ್ಷಣ ಸ್ಥಳಕ್ಕೆ ಧಾವಿಸಿದ ಹಿಂದೂ ಜಾಗರಣ ವೇದಿಕೆ ಮೂಡುಬಿದಿರೆ ಘಟಕದ ಕಾರ್ಯಕರ್ತರು, ಮೃತಪಟ್ಟ ದನಗಳ ಅಂತ್ಯಕ್ರಿಯೆಯನ್ನು ಶಾಸ್ತ್ರೋಕ್ತವಾಗಿ ನೆರವೇರಿಸಿ ತಮ್ಮ ಸಮಾಜಮುಖಿ ಕಾಳಜಿಯನ್ನು ಮೆರೆದಿದ್ದಾರೆ. ಗಾಯಗೊಂಡ ದನಕ್ಕೆ ಸೂಕ್ತ ಚಿಕಿತ್ಸೆ ಸಿಗುವಂತೆ ವ್ಯವಸ್ಥೆ ಮಾಡಿದ್ದಾರೆ.
​ಈ ಸಂದರ್ಭದಲ್ಲಿ ಹಿಂದೂ ಜಾಗರಣ ವೇದಿಕೆಯ ಜಿಲ್ಲಾ ಪ್ರಮುಖರಾದ ಸಂದೀಪ್ ಹೆಗ್ಡೆ, ನಗರ ಸಂಯೋಜಕರಾದ ನಾಗೇಂದ್ರ ಭಂಡಾರಿ, ತಾಲೂಕು ಪ್ರಮುಖರಾದ ಜಗದೀಶ್, ಉದಯ ಬನ್ನಡ್ಕ, ಅಂಕುಶ್, ಸಂದೀಪ್ ಪೂಜಾರಿ, ದೀಪಕ್ ಬನ್ನಡ್ಕ, ಸತೀಶ್ ಪೂಜಾರಿ, ದಿನೇಶ್ ಪೂಜಾರಿ ಹಾಗೂ ಹಲವಾರು ಪ್ರಮುಖರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.