ವರದಿ ರಾಯಿ ರಾಜ ಕುಮಾರ
ಮಂಗಳೂರಿನ ಮುಕ್ಕದಲ್ಲಿರುವ ಶ್ರೀನಿವಾಸ್ ವಿಶ್ವವಿದ್ಯಾಲಯದಲ್ಲಿ ಏಪ್ರಿಲ್ 29 ಮತ್ತು 30 ರಂದು ಅಂತರಾಷ್ಟ್ರೀಯ ತಾಂತ್ರಿಕ ಸಮ್ಮೇಳನ ನಡೆಯಲಿದೆ. ಬೆಂಗಳೂರಿನ ಇನ್ಸ್ಟಿಟ್ಯೂಟ್ ಆಫ್ ಎಲೆಕ್ಟ್ರಿಕಲ್ ಅಂಡ್ ಎಲೆಕ್ಟ್ರಾನಿಕ್ಸ್ ಇಂಜಿನಿಯರ್ಸ್ ಮತ್ತು ಮಂಗಳೂರು ವಿಭಾಗಗಳ ಸಹಯೋಗದಲ್ಲಿ ನಡೆಯುತ್ತಿರುವ ವಿಜ್ಞಾನ ಹಾಗೂ ತಂತ್ರಜ್ಞಾನಗಳ ಸಮ್ಮೇಳನ ಇದಾಗಿದೆ. ಐ ಇ ಇ ಇ ಸಹಭಾಗಿತ್ವದಲ್ಲಿ ಇದೇ ಮೊದಲ ಬಾರಿಗೆ ಅಂತರಾಷ್ಟ್ರೀಯ ಸಮ್ಮೇಳನ ನಡೆಯುತ್ತಿದ್ದು ಉದ್ಯಮ ಕ್ಷೇತ್ರದ ಪರಿಣಿತರು, ಶೈಕ್ಷಣಿಕ ವಲಯದ ಸಾಧಕರು, ಅತ್ಯುತ್ತಮ ಸಾಧನೆಯನ್ನು ಮಾಡಿದ ವಿದ್ಯಾರ್ಥಿಗಳಿಗೆ ಸಂಶೋಧನಾ ಪ್ರಬಂಧಗಳನ್ನು ಮಂಡಿಸಲು ಈ ಸಂದರ್ಭದಲ್ಲಿ ಜಾಗತಿಕ ವೇದಿಕೆಯನ್ನು ಒದಗಿಸಲಾಗಿದೆ ಎಂದು ಶ್ರೀನಿವಾಸ್ ವಿಶ್ವವಿದ್ಯಾಲಯದ ಮುಖ್ಯಸ್ಥ, ಡೀನ್ ಡಾ. ರಾಧಾಕೃಷ್ಣ ಎನ್ ಹೆಗಡೆ ತಿಳಿಸಿದ್ದಾರೆ.
ತಾಂತ್ರಿಕ ವಿಭಾಗದ ಎಲ್ಲಾ ವಿಷಯದ 509 ಸಂಶೋಧನಾ ಪ್ರಬಂಧಗಳಲ್ಲಿ ಆಯ್ಕೆ ಮಾಡಲಾದ 152 ಮಹಾ ಪ್ರಬಂಧಗಳಿಗೆ ಅವಕಾಶಗಳನ್ನು ಒದಗಿಸಲಾಗಿದೆ. ಪ್ರತಿಯೊಂದು ವಿಭಾಗದಲ್ಲಿಯೂ ಅತ್ಯುತ್ತಮ ಪ್ರಬಂಧಕ್ಕೆ ವಿಶೇಷ ಬಹುಮಾನ ಹಾಗೂ ಒಟ್ಟಾರೆ ಅತ್ಯುತ್ತಮ ಪ್ರಬಂಧಕ್ಕೆ ಇನ್ನೂ ವಿಶೇಷವಾದ ಬಹುಮಾನಗಳನ್ನು ನಿಗದಿಪಡಿಸಿದೆ. ತಜ್ಞರ ದಿಕ್ಸೂಚಿ ಭಾಷಣ, ಪರಿಣಿತರ ಚರ್ಚೆಗಳು, ಪ್ರಾಜೆಕ್ಟ್ ಪ್ರದರ್ಶನಗಳು ಈ ಎರಡು ದಿನಗಳಲ್ಲಿ ನಡೆಯಲಿವೆ.
ಜರ್ಮನ್, ಸ್ಕಾಟ್ಲ್ಯಾಂಡ್, ಬೆಂಗಳೂರಿನ ಐಬಿಎಂ, ಎನ್ಐಟಿಕೆ,, ಇತ್ಯಾದಿ ಹೆಸರಾಂತ ಅಂತರಾಷ್ಟ್ರೀಯ ಸಂಸ್ಥೆಗಳ ವಿಜ್ಞಾನಿಗಳು, ಮಾರ್ಗದರ್ಶಕರು ಭಾಗವಹಿಸುತ್ತಿರುವ ಈ ಶೈಕ್ಷಣಿಕ ಸಮ್ಮೇಳನದಲ್ಲಿ ವಿಜ್ಞಾನಿಗಳು ಹಾಗೂ ವಿದ್ಯಾರ್ಥಿಗಳು ಸಾಕಷ್ಟು ಮಾಹಿತಿಗಳನ್ನು ಪಡೆದುಕೊಳ್ಳಲಿದ್ದಾರೆ.
ಭಾರತದ ಖ್ಯಾತ ಅಂತರಿಕ್ಷ ವಿಜ್ಞಾನಿ, ಇಸ್ರೋ ಮಾಜಿ ಅಧ್ಯಕ್ಷ, ಪದ್ಮಶ್ರೀ ಎ ಎಸ್ ಕಿರಣ್ ಕುಮಾರ್, ಇತ್ಯಾದಿಯರು, ಕುಲಾಧಿಪತಿ ಡಾ. ಶ್ರೀನಿವಾಸರಾವ್, ವಿಶ್ವಸ್ಥ ಮಂಡಳಿಯ ಸದಸ್ಯರುಗಳು ಹಾಜರಿರುತ್ತಾರೆ ಎಂದು ಸೈಬರ್ ಸೆಕ್ಯೂರಿಟಿ ಮುಖ್ಯಸ್ಥ ಪ್ರೊ. ಗೌರವ ಪ್ರಸಾದ್, ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ. ರಾಮ ನರಸಿಂಹ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.
Home Uncategorized ಮಂಗಳೂರು ಮುಕ್ಕ ಶ್ರೀನಿವಾಸ ವಿಶ್ವವಿದ್ಯಾಲಯದಲ್ಲಿ ಏಪ್ರಿಲ್ 29, 30ರಂದು ಅಂತರಾಷ್ಟ್ರೀಯ ತಾಂತ್ರಿಕ ಸಮ್ಮೇಳನ

