ನಾಳೆ (28) ಕದ್ರಿ ದೇವಸ್ಥಾನದಲ್ಲಿ – ವಿಸರ್ಜನೆ ಅಭಿಯಾನ 2026ರ ಸಮಾರೋಪ

0
4

ರಾಮಕೃಷ್ಣ ಮಿಷನ್ ಸ್ವಚ್ಛ ಮಂಗಳೂರು ಅಭಿಯಾನದ ಅಂತರ್ಗತ ವಿಸರ್ಜನೆ ಅಭಿಯಾನ – 2026 ಯಶಸ್ವಿಯಾಗಿ ಪೂರ್ಣಗೊಂಡಿದ್ದು, ಕೇವಲ 10 ದಿನಗಳಲ್ಲಿ, ಒಟ್ಟು 12.5 ಟನ್ ಧಾರ್ಮಿಕ ತ್ಯಾಜ್ಯವನ್ನು ಸಂಗ್ರಹಿಸಿ, ಗೌರವಪೂರ್ವಕವಾಗಿ ವೈಜ್ಞಾನಿಕ ವಿಧಾನದಲ್ಲಿ ಸಂಸ್ಕರಿಸಲಾಗಿದೆ.

ಈ ಉಪಕ್ರಮದ ಅರ್ಥಪೂರ್ಣ ಸಮಾರೋಪವಾಗಿ, ನಾಳೆ, ಪೂಜ್ಯ ಸ್ವಾಮಿ ಜಿತಕಾಮಾನಂದಜಿಯವರ ಸಾನ್ನಿಧ್ಯದಲ್ಲಿ, ಸ್ವಚ್ಛ ಮಂಗಳೂರು ಅಭಿಯಾನದ ಸ್ವಯಂಸೇವಕರು, ಅಭಿಯಾನದ ವೇಳೆ ಸಂಗ್ರಹಿಸಿ ಸಂಸ್ಕರಿಸಿದ ಬೆಳ್ಳಿ, ತಾಮ್ರ ಮತ್ತು ಪಿತ್ತಳದ ಲೋಹಗಳನ್ನು (ಸುಮಾರು ₹1,00,000 ಮೌಲ್ಯದ) ಕದ್ರಿ ಶ್ರೀ ಮಂಜುನಾಥ ದೇವಸ್ಥಾನಕ್ಕೆ ಸಮರ್ಪಿಸಲಿದ್ದಾರೆ.

ಈ ಸಂದರ್ಭದಲ್ಲಿ ದೇವಸ್ಥಾನದ ಅಧ್ಯಕ್ಷರಾದ ಶ್ರೀ ಎ.ಜೆ. ಶೆಟ್ಟಿ ಹಾಗೂ ಇತರ ಟ್ರಸ್ಟಿಗಳು ಸಹ ಉಪಸ್ಥಿತರಿರುತ್ತಾರೆ. ಈ ಸಂದರ್ಭದಲ್ಲಿ ಅಭಿಯಾನದ ವಿಸ್ತೃತ  ವರದಿ ಹಾಗೂ ಮಾಹಿತಿಯನ್ನು ಮಾಧ್ಯಮದೊಂದಿಗೆ ಹಂಚಿಕೊಳ್ಳಲಾಗುತ್ತದೆ.

ಈ ಪುಟ್ಟ ಸಮಾರಂಭದಲ್ಲಿ ಭಾಗವಹಿಸಲು ನಾಳೆ ಮಧ್ಯಾಹ್ನ 12:00 ಗಂಟೆಗೆ ಕದ್ರಿ ದೇವಸ್ಥಾನಕ್ಕೆ ಆಗಮಿಸುವಂತೆ ವಿನಂತಿ. ನಂತರ ಪ್ರಸಾದ ಭೋಜನ ವ್ಯವಸ್ಥೆ ಇದೆ ಎಂದು ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here