ಜೆಸಿಐ ಪರ್ಕಳದಿಂದ “ಸಲ್ಯೂಟ್ ದ ಸೈಲೆಂಟ್ ಸ್ಟಾರ್” ಪ್ರಶಸ್ತಿ – ರಂಗಭೂಮಿ, ಸಿನೆಮಾ ಕಲಾವಿದ ಜಯಕರ ಮಣಿಪಾಲ ಅವರಿಗೆ ಗೌರವ

0
20

ಪರ್ಕಳ : ಜೆಸಿಐ ಪರ್ಕಳ ವತಿಯಿಂದ ದಿನಾಂಕ 30-04-2026 ರಂದು ಆಯೋಜಿಸಲಾದ “ Salute the Silent Star ” ಪ್ರಶಸ್ತಿ ಪ್ರದಾನ ಸಮಾರಂಭವು ಭರ್ಜರಿಯಾಗಿ ನೆರವೇರಿತು.
ಸಮಾಜದಲ್ಲಿ ಮೌನವಾಗಿ ತಮ್ಮ ಸೇವೆಯನ್ನು ಸಲ್ಲಿಸುತ್ತಿರುವ ವ್ಯಕ್ತಿಗಳನ್ನು ಗುರುತಿಸಿ ಗೌರವಿಸುವ ಉದ್ದೇಶದಿಂದ ಹಮ್ಮಿಕೊಳ್ಳಲಾದ ಈ ಕಾರ್ಯಕ್ರಮದಲ್ಲಿ, ರಂಗಭೂಮಿ, ಸಿನೆಮಾ ಕಲಾವಿದ ಹಾಗೂ ನಾಟಕ ನಿರ್ದೇಶಕರಾದ ಶ್ರೀ ಜಯಕರ ಮಣಿಪಾಲ ಅವರಿಗೆ “ಸೈಲೆಂಟ್ ಸ್ಟಾರ್” ಪ್ರಶಸ್ತಿಯನ್ನು ಪ್ರದಾನಿಸಿ ಸನ್ಮಾನಿಸಲಾಯಿತು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಭೂಧ ಶೆಟ್ಟಿಗಾರ್ ಅವರು ಮಾತನಾಡಿ, ರಂಗಭೂಮಿ ಮತ್ತು ಕಲಾರಂಗದಲ್ಲಿ ದೀರ್ಘಕಾಲ ಸೇವೆ ಸಲ್ಲಿಸಿರುವ ಜಯಕರ ಮಣಿಪಾಲ ಅವರ ಸಾಧನೆಯನ್ನು ಶ್ಲಾಘಿಸಿದರು. ಇಂತಹ ವ್ಯಕ್ತಿಗಳನ್ನು ಗುರುತಿಸಿ ಗೌರವಿಸುವುದು ಸಮಾಜಕ್ಕೆ ಮಾದರಿಯಾಗಿದೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೆಸಿಐ ಪರ್ಕಳದ ಅಧ್ಯಕ್ಷರಾದ Jc HGF ಭರತ್ ಕೆ. ಕುಲಾಲ್ ವಹಿಸಿದ್ದರು. ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಅವರು, ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಶ್ರಮಿಸುತ್ತಿರುವ ಪ್ರತಿಭೆಗಳನ್ನು ಹೊರತಂದು ಗೌರವಿಸುವುದು ಜೆಸಿಐಯ ಉದ್ದೇಶವಾಗಿದ್ದು, ಮುಂದಿನ ದಿನಗಳಲ್ಲಿಯೂ ಇಂತಹ ಕಾರ್ಯಕ್ರಮಗಳನ್ನು ಮುಂದುವರಿಸುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಜೆಸಿಐ ಸದಸ್ಯರು, ಗಣ್ಯರು ಹಾಗೂ ಸ್ಥಳೀಯರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದು, ಪ್ರಶಸ್ತಿ ಪುರಸ್ಕೃತರಿಗೆ ಅಭಿನಂದನೆ ಸಲ್ಲಿಸಿದರು. ಕಾರ್ಯಕ್ರಮವು ಅರ್ಥಪೂರ್ಣವಾಗಿ ಮತ್ತು ಯಶಸ್ವಿಯಾಗಿ ನೆರವೇರಿತು.

LEAVE A REPLY

Please enter your comment!
Please enter your name here