ದೇವಸ್ಥಾನಕ್ಕೆ ಸೇವೆ ಸಲ್ಲಿಸುವ ಕಾಯಕ ದೇವರ ಧ್ಯಾನ – ಡಾ. ನಲ್ಲೂರು ಅರುಣಾಚಲ ಎನ್.ರೇವಣಕರ್

0
4

ಮಾನವನ ಜೀವನದಲ್ಲಿ ಹೊಟ್ಟೆಪಾಡು, ದುಡಿಮೆ ತಪ್ಪಲ್ಲ ಜೊತೆಗೆ ದೇವಸ್ಥಾನಕ್ಕೆ ಸೇವೆ ಸಲ್ಲಿಸುವ ಕಾಯಕ ದೇವರ ಧ್ಯಾನ, ಸಾಮಾಜಿಕ ಕಾಳಜಿಯೊಂದಿಗೆ ಸಂಕುಚಿತ ಭಾವನೆ ಬಿಟ್ಟು ವಿಶಾಲವಾದ ಸೇವಾ ಮನೋಭಾವನೆಯೊಂದಿಗೆ ಸೇವೆ ಸಲ್ಲಿಸಿದರೆ ಅದೇ ದೇವರ ಪೂಜೆ ಎಂದು ದಾವಣಗೆರೆಯ ಶ್ರೀಮತಿ ಪ್ರೇಮಾ ಅರುಣಾಚಲ ಎನ್. ರೇವಣಕರ್ ಪ್ರತಿಷ್ಠಾನದ ಸಂಸ್ಥಾಪಕರು, ಶ್ರೀ ಸಂಸ್ಥಾನದ ವಿಮಲೇಶ್ವರ ದೇವಸ್ಥಾನದ ಸಮಿತಿಯ ಉಪಾಧ್ಯಕ್ಷರಾದ ಡಾ. ನಲ್ಲೂರು ಅರುಣಾಚಲ ಎನ್.ರೇವಣಕರ್ ತಮ್ಮ ಮನದಾಳದ ಮಾತು ಹಂಚಿಕೊಂಡರು.

ಗೋವಾ ರಾಜ್ಯದ ರೇವಣದ ಶ್ರೀ ವಿಮಲೇಶ್ವರ ಸಭಾಂಗಣದಲ್ಲಿ ಇತ್ತೀಚಿಗೆ ದೇವಸ್ಥಾನಕ್ಕೆ ಸೇವೆ ಸಲ್ಲಿಸುವ ಸಮಾರಂಭದ ಜ್ಯೋತಿ ಬೆಳಗುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ ಗೋವಾದ ರೇವಣದ ಶ್ರೀ ವಿಮಲೇಶ್ವರ ದೇವಸ್ಥಾನದ ಸಮಿತಿಯ ಅಧ್ಯಕ್ಷರಾದ ರಾಮನಾಥ್ ಪ್ರಭು ದೇಸಾಯಿ ಮಾತನಾಡಿ, ಈ ದೇವಸ್ಥಾನದ ಸುಸಜ್ಜಿತ ಅಭಿವೃದ್ಧಿಗೆ ತನು, ಮನ, ಧನದೊಂದಿಗೆ ಸೇವೆ ಸಲ್ಲಿಸಿದ್ದು ದಾವಣಗೆರೆ ರೇವಣಕರ್ ಪರಿವಾರ ಇಡೀ ಕರ್ನಾಕಟದ ವಿವಿಧ ಜಿಲ್ಲೆಗಳ ಉಪಾಧ್ಯಕ್ಷರುಗಳು, ದೈವಜ್ಞ ಸಮಾಜದ ದಾನಿಗಳು, ಶ್ರೀ ವಿಮಲೇಶ್ವರ ದೇವರಿಗೆ ಚಿನ್ನದ, ಬೆಳ್ಳಿಯ ಮುಖಪುಟ ಸೃಷ್ಠಿ ಮಾಡಿದ್ದು ಶ್ಲಾಘನೀಯ. ಇವೆಲ್ಲಾ ಸೇವೆಗಳ ಮುಖ್ಯಸ್ಥರು ಡಾ. ನಲ್ಲೂರು ಅರುಣಾಚಲ ಎನ್.ರೇವಣಕರ್‌ರವರು ಇವರಿಗೆ ಹೃದಯ ಪೂರ್ವಕ ಕೃತಜ್ಞತೆಗಳು ಎಂದರು.

ಮುಖ್ಯ ಅತಿಥಿಗಳಾಗಿ ವೇದಿಕೆಯಲ್ಲಿ ಉಪಸ್ಥಿತರಿದ್ದ ಶ್ರೀ ವಿಮಲೇಶ್ವರ ದೇವಸ್ಥಾನದ ಸಮಿತಿಯ ಕಾರ್ಯದರ್ಶಿ ದಿಗಂಬರ ಆರ್.ಪ್ರಭುದೇಸಾಯಿ, ಕಾರವಾರದ ಹಿರಿಯ ಸಮಾಜ ಸೇವಕರಾದ ಆತ್ಮಾನಂದ ವಿಠಲ್ ರೇವಣಕರ್, ಮೈಸೂರಿನ ಹಿರಿಯ ಸಮಾಜ ಸೇವಕರಾದ ಮೀರಾ ನಾಗೇಶ್ ಶೇಟ್ ರೇವಣಕರ್, ಮಾತನಾಡಿ, ಈ ಕುಲದೇವರ ಸೇವಾ ಮನೋಭಾವ ನಮ್ಮ ನಿಮೆಲ್ಲರ ಜೀವನಕ್ಕೆ ಸಾರ್ಥಕತೆ ಬರುತ್ತದೆ. ಕುಟುಂಬದ ಮುಂದಿನ ಜೀವನಕ್ಕೆ ಭದ್ರವಾದ ಬುನಾದಿ ಎಂದರು.

ಶಿರಸಿಯ ದೇವಿದಾಸ್ ಬಿ.ಭಟ್, ದಾವಣಗೆರೆ ರೇವಣಕರ್ ಪರಿವಾರದ ನೂತನ ಅಧ್ಯಕ್ಷರಾದ ಮಂಜುನಾಥ್ ರೇವಣಕರ್, ದೇವಸ್ಥಾನದ ಅರ್ಚಕರಾದ ಅನಿರುದ್ಧ್ ಭಟ್, ಬೆಳಗಾವಿಯ ದೀನನಾಥ ಪುರುಷೋತ್ತಮ ವೇದಿಕೆಯಲ್ಲಿ ಕವಿತಾ ಗುರುಪ್ರಸಾದ್‌ರವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಈ ಸೇವಾ ಸಮಾರಂಭಕ್ಕೆ ಸಾಗರದ ಅರುಣ್‌ಕುಮಾರ್ ಶೇಟ್ ಸ್ವಾಗತಿಸಿದರು. ಕೊನೆಯಲ್ಲಿ ದಾವಣಗೆರೆಯ ನಲ್ಲೂರು ರಾಜಕುಮಾರ್ ಶಾಂತಾರಾಮ ವಂದಿಸಿದರು. ದೇವಸ್ಥಾನದ ಎಲ್ಲಾ ರೀತಿಯ ಅಭಿವೃದ್ಧಿಗಳಿಗೆ ಸೇವೆ ಅರ್ಪಿಸಿದ ಸರ್ವರಿಗೂ ಸಮಿತಿ ಸದಸ್ಯರು ಕೃತಜ್ಞತೆ ಸಲ್ಲಿಸಿದರು.

LEAVE A REPLY

Please enter your comment!
Please enter your name here