ಹೆಬ್ರಿ ತಹಶೀಲ್ಧಾರ್‌ ಎಸ್.‌ಎ.ಪ್ರಸಾದ್‌ ಅವರಿಗೆ ” ಕಾಯಕರತ್ನ” ಪ್ರಶಸ್ತಿ

0
87

ಹೆಬ್ರಿ : ವಿಶೇಷ ಸಾಮಾಜಿಕ ಸೇವೆಗಾಗಿ ಬಹುಮುಖ ಪ್ರತಿಭೆಯ ಹೆಬ್ರಿ ತಹಶೀಲ್ಧಾರ್‌ ಎಸ್.‌ಎ.ಪ್ರಸಾದ್‌ ಅವರಿಗೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಾಂಸ್ಕೃತಿಕ ಮತ್ತು ಸಾಹಿತ್ಯ ಪರಿಷತ್ತು ರಾಜ್ಯ ಘಟಕ ಬೆಂಗಳೂರು ವತಿಯಿಂದ ಧಾರವಾಡದಲ್ಲಿ ಇತ್ತೀಚೆಗೆ ನಡೆದ ಪದಗ್ರಹಣ ಸಮಾರಂಭದಲ್ಲಿ ” ಕಾಯಕರತ್ನ” ಪ್ರಶಸ್ತಿ ನೀಡಿ ಗೌರವಿಸಿದೆ.

ವಿಧಾನ ಪರಿಷತ್‌ ಸಭಾಪತಿ ಬಸವರಾಜ್‌ ಹೊರಟ್ಟಿ ಪ್ರಶಸ್ತಿ ಪ್ರಧಾನ ಮಾಡಿದರು. ಮಾಜಿ ಸಂಸದ ಐ.ಎ.ಸನದಿ, ರಾಜ್ಯ ಘಟಕದ ಪದಾಧಿಕಾರಿಗಳಾದ ಮಲ್ಲಿಕಾರ್ಜುನ ತೊದಲಬಾಗಿ, ಎಲ್.ಐ. ಲಕ್ಕಮ್ಮನವರ, ರಮಾ ಆರ್‌. ಪರ್ವಿನ್‌ ಬಾನು ಬುಳ್ಳಣ್ಣನವರ, ಮಲ್ಲಿಕಾರ್ಜುನಯ್ಯ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಸಂಘಟನಾ ಕಾರ್ಯದರ್ಶಿಯಾಗಿ ರವೀಂದ್ರ ಹೆಗ್ಡೆ ಮತ್ತು ಜಿಲ್ಲಾ ಘಟಕದ ಅಧ್ಯಕ್ಷರಾಗಿ ಉಷಾಲತಾ ಶೆಟ್ಟಿ ಪ್ರಮಾಣವಚನ ಸ್ವೀಕರಿಸಿದರು.

ವರದಿ : ಸುಕುಮಾರ್ ಮುನಿಯಾಲ್

LEAVE A REPLY

Please enter your comment!
Please enter your name here