ಕೊಯ್ಯೂರು ಇಲ್ಲಿಯ ಡೆಂಬುಗಕಜೆ ಮತ್ತು ಲಿಂಗಪ್ಪ ಗೌಡರು ನೂತನವಾಗಿ ನಿರ್ಮಿಸಿದ ಗೃಹಪ್ರವೇಶದ ಮೊದಲನೆಯ ದಿನ ವಾಸ್ತು ಪೂಜೆಯ ಸಂದರ್ಭದಲ್ಲಿ ಶ್ರೀ ಕೃಷ್ಣ ಭಜನಾ ಮಂಡಳಿ (ರಿ) ಆದೂರು ಪೇರಾಲ್ ಕೊಯ್ಯೂರು ಇದರ ಸಹಕಾರದೊಂದಿಗೆ ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ತಿನ ರಾಜ್ಯಾಧ್ಯಕ್ಷರಾದ ಪಿ ಚಂದ್ರಶೇಖರ ಸಾಲ್ಯಾನ್ ಇವರ ನೇತೃತ್ವದಲ್ಲಿ ವಿವಿಧ ಭಜನಾ ಮಂಡಳಿಗಳ ಒಗ್ಗೂಡುವಿಕೆಯೊಂದಿಗೆ ವಿಶೇಷ ಭಜನೋತ್ಸವ ಕಾರ್ಯಕ್ರಮ ನಡೆದು ಕಾರ್ಯಕ್ರಮಕ್ಕೆ ಆಗಮಿಸಿದಂತ ಮನೆಯವರ ಎಲ್ಲಾ ಬಂಧು ಭಗಿನಿಯರನ್ನು ಕೆಲ ಹೊತ್ತು ಭಕ್ತಿಯ ಸಾಗರಕ್ಕೆ ಕೊಂಡೊಯ್ಯುವಂತೆ ಮಾಡಿತು.

ಭಜನಾಮೃತಾ ಭಜನಾ ತಂಡ ಕಡಬ ಇವರ ಭಜನಾ ಹಾಡುಗಾರಿಕೆ ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ಭಜನಾ ಕಮ್ಮಟದ ಕುಣಿತ ಭಜನಾ ಗುರುಗಳಾದ ಸಂದೇಶ ಮದ್ದಡ್ಕ ಹಾಗೂ ತಂಡದವರ ಸಹಕಾರದೊಂದಿಗೆ ಕುಣಿತ ಭಜನೆ ನಡೆಯಿತು.

