ಸಾಲಿಗ್ರಾಮ : ಬನ್ನಾಡಿ ಕಂಬಳಗದ್ದೆ ಮನೆ ನಿವಾಸಿ, ರಾಘವೇಂದ್ರ ಮೆಡಿಕಲ್ಸ್ ಮಾಲೀಕರಾದ ಸುಧಾಕರ ಶೆಟ್ಟಿ (68 ವರ್ಷ) ಅವರು ಅಲ್ಪಕಾಲದ ಅನಾರೋಗ್ಯದಿಂದ ಚೇತರಿಸಿಕೊಳ್ಳಲಾರದೆ ಇಂದು (06-05-2026) ಬೆಳಿಗ್ಗೆ 10.45ಕ್ಕೆ ನಿಧನರಾದರು.
ಮೃತರು ಧರ್ಮಪತ್ನಿ ಶಶಿಕಲಾ ಎಸ್. ಶೆಟ್ಟಿ, ಪುತ್ರ ದರ್ಶನ್, ಪುತ್ರಿ ಧನ್ಯಶ್ರೀ, ಸಹೋದರ ದಿನಕರ ಶೆಟ್ಟಿ, ಸಹೋದರಿಯರಾದ ಕುಸುಮ ಎಂ. ಶೆಟ್ಟಿ ಮತ್ತು ಹೇಮಾ ಎಸ್. ಶೆಟ್ಟಿ ಸೇರಿದಂತೆ ಕುಟುಂಬ ವರ್ಗ ಹಾಗೂ ಬಂಧು-ಮಿತ್ರರನ್ನು ಅಗಲಿದ್ದಾರೆ.
ಸೌಮ್ಯ, ಸರಳ ಮತ್ತು ಸಜ್ಜನಿಕೆಯ ವ್ಯಕ್ತಿತ್ವದಿಂದ ಎಲ್ಲರ ಮನಗೆದ್ದಿದ್ದ ಸುಧಾಕರ ಶೆಟ್ಟಿ ಅವರ ಅಗಲಿಕೆಯು ಅಪಾರ ದುಃಖವನ್ನುಂಟುಮಾಡಿದೆ. ಅವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ಭಗವಂತನು ಕುಟುಂಬದವರಿಗೆ ನೀಡಲಿ ಹಾಗೂ ಅಗಲಿದ ಆತ್ಮಕ್ಕೆ ಚಿರಶಾಂತಿ ಲಭಿಸಲಿ ಎಂದು ಎಲ್ಲರೂ ಪ್ರಾರ್ಥಿಸಿದ್ದಾರೆ.
ಮೃತರ ಅಂತ್ಯಸಂಸ್ಕಾರ ಇಂದು ಮಧ್ಯಾಹ್ನ 2.00 ಗಂಟೆಗೆ ಬನ್ನಾಡಿಯ ಸ್ವಗೃಹದಲ್ಲಿ ನಡೆಯಲಿದೆ.

