ಪಕ್ಷಿಕೆರೆ : ಉಚಿತ ಸಾಮಾನ್ಯ ವೈದ್ಯಕೀಯ, ನೇತ್ರ ತಪಾಸಣಾ ಮತ್ತು ದಂತ ಚಿಕಿತ್ಸಾ ಶಿಬಿರ

0
17

ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ (ನಿ.) ಮಂಗಳೂರು ಇದರ ಪಕ್ಷಿಕೆರೆ ಶಾಖೆಯ ದ್ವಿತೀಯ ವಾರ್ಷಿಕೋತ್ಸವದ ಪ್ರಯುಕ್ತ ಉಚಿತ ಸಾಮಾನ್ಯ ವೈದ್ಯಕೀಯ, ನೇತ್ರ ತಪಾಸಣಾ ಮತ್ತು ದಂತ ಚಿಕಿತ್ಸಾ ಶಿಬಿರವನ್ನು ದಿನಾಂಕ 10-05-2026ನೇ ಆದಿತ್ಯವಾರ ಪೂರ್ವಾಹ್ನ ೯.೩೦ರಿಂದ ಅಪರಾಹ್ನ 12-30 ರವರೆಗೆ ಅಂಬೇಡ್ಕರ್ ಭವನ , ಕರ‍್ದಬ್ಬು ದೈವಸ್ಥಾನದ ಹತ್ತಿರ, ಪಕ್ಷಿಕೆರೆ ಇಲ್ಲಿ ಆಯೋಜಿಸಲಾಗಿದೆ.

ಈ ವೈದ್ಯಕೀಯ ಶಿಬಿರದಲ್ಲಿ ಮಣಿಪಾಲ ಕಾಲೇಜ್ ಡೆಂಟಲ್ ಸಾಯನ್ಸಸ್, ಮಂಗಳೂರು ಇದರ ನುರಿತ ವೈದ್ಯರ ತಂಡದವರಿಂದ ದಂತ ತಪಾಸಣೆ ಮತ್ತು ಸಲಹೆ, ಹಲ್ಲುಗಳ ಶುಚಿ, ಹುಳುಕು ಹಲ್ಲುಗಳನ್ನು ಭರ್ತಿ ಮಾಡುವುದು ಹಾಗೂ ಕೆ.ಎಂ.ಸಿ. ಆಸ್ಪತ್ರೆ ಅತ್ತಾವರ ಇದರ ನುರಿತ ವೈದ್ಯರ ತಂಡದವರಿಂದ ಕಣ್ಣಿನ ತಪಾಸಣೆ, ಅಗತ್ಯವುಳ್ಳವರಿಗೆ ಕಣ್ಣಿನ ಪೊರೆಯ ಶಸ್ತç ಚಿಕಿತ್ಸೆ, ಮಧುಮೇಹ ತಪಾಸಣೆ, ಬಿ. ಪಿ ತಪಾಸಣೆ, ಸಾಮಾನ್ಯ ವೈದ್ಯಕೀಯ ಸಮಾಲೋಚನೆ, ಕಿವಿ, ಮೂಗು ಮತ್ತು ಗಂಟಲು ತಪಾಸಣೆ, ಹೆಚ್ಚಿನ ಚಿಕಿತ್ಸೆಗೆ ಹಸಿರು ಕಾರ್ಡನ್ನು ನೀಡುವುದು ಹಾಗೂ ಇತರ ವೈದ್ಯಕೀಯ ಸೇವೆಗಳು ಲಭ್ಯವಿರುತ್ತದೆ. ಅಗತ್ಯವುಳ್ಳವರಿಗೆ ಉಚಿತ ಕನ್ನಡಕ ವಿತರಣೆಯನ್ನು ಮಾಡಲಾಗುವುದು.

ಈ ವೈದ್ಯಕೀಯ ಶಿಬಿರವನ್ನು ಎನ್. ಜಿ. ವರ್ಲ್್ಡ ಚಾರಿಟೇಬಲ್ ಟ್ರಸ್ಟ್ (ರಿ.) ಮಂಗಳೂರು, ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘ (ರಿ.) ಎಸ್. ಕೋಡಿ ತೋಕೂರು, ವಿನಾಯಕ ಮಿತ್ರ ಮಂಡಳಿ (ರಿ.) ಹಾಗೂ ವಿನಾಯಕ ಮಹಿಳಾ ಮಂಡಳಿ (ರಿ.) ಪಕ್ಷಿಕೆರೆ. ಹರಿಪಾದ ಜಾರಂದಾಯ ಯುವಕ ಮಂಡಲ (ರಿ.) ಹಾಗೂ ಮಹಿಳಾ ಮಂಡಳಿ (ರಿ.) ಪಂಜ, ಕೊÊಕುಡೆ ಹಾಗೂ ಶ್ರೀ ಕರ‍್ದಬ್ಬು ದೈವಸ್ಥಾನ ಸೇವಾ ಸಮಿತಿ (ರಿ.) ಪಕ್ಷಿಕೆರೆ ಇವರುಗಳ ಸಹಕಾರದೊಂದಿಗೆ ಆಯೋಜಿಸಲಾಗಿದೆ.

ಸಂಘದ ಸದಸ್ಯರು ಮತ್ತು ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆಯಬೇಕಾಗಿ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಚಿತ್ತರಂಜನ್ ಬೋಳಾರ್ ರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು.

LEAVE A REPLY

Please enter your comment!
Please enter your name here