ಶ್ರೀ ನಿತ್ಯಾನಂದ ಸ್ವಾಮಿ ಮಂದಿರ ಮಠ ಉಡುಪಿ ಶ್ರೀ ಸ್ವಾಮಿಯ ಸನ್ನಿಧಿಯಲ್ಲಿ ಶ್ರೀ ಗುರು ಪೂರ್ಣಿಮಾ ಮೋಹೋತ್ಸವ ಅಂಗವಾಗಿ ಚಂಡೆ ,ಮಂಗಳವಾದ್ಯದೊಂದಿಗೆ ರಾತ್ರಿ ಪಲ್ಲಕ್ಕಿ ಉತ್ಸವ ನೆಡೆಯಿತು.

ಶ್ರೀ ನಿತ್ಯಾನಂದ ಸ್ವಾಮೀಜಿಗೆ ವಿಶೇಷ ಅಲಂಕಾರ, ವಿಶೇಷ ಪೂಜೆ ಪ್ರಸಾದ ವಿತರಣೆ ನೆಡೆಯಿತು. ಮಂದಿರದ ಅರ್ಚಕರಾದ ಸತ್ಯೇಂದ್ರ ಮಹಾರಾಜ್, ಓಂ ಪ್ರಕಾಶ್ , ಧಾರ್ಮಿಕ ಪೂಜಾ ಕಾರ್ಯ ನೆಡೆಸಿಕೊಟ್ಟರು .

ಮಂದಿರದ ಧರ್ಮದರ್ಶಿ ಕೆ ಕೆ ಅವರ್ಸೆಕರ್ ಮುಂಬಯಿ , ಟ್ರಸ್ಟಿ ಗಳಾದ ಕೆ ದಿವಾಕರ್ ಶೆಟ್ಟಿ ತೋಟದಮನೆ ಕೊಡವೂರು , ಕಾಪು ಶಾಸಕರಾದ ಸುರೇಶ ಶೆಟ್ಟಿ ಗುರ್ಮೆ , ಅಧ್ಯಕ್ಷರಾದ ಉದಯ ಕುಮಾರ್ ಶೆಟ್ಟಿ ಬನ್ನಂಜೆ , ಕಾರ್ಯದರ್ಶಿ ಈಶ್ವರ ಶೆಟ್ಟಿ ಚಿಟ್ಪಾಡಿ , ತೋನ್ಸೆ ನವೀನ್ ಶೆಟ್ಟಿ , ಮೋಹನ್ ಚಂದ್ರ ನಂಬಿಯಾರ್ , ವಿ ಜಿ ಶೆಟ್ಟಿ , ಶ್ರೀಮತಿ ಬಿಂದು ಶೆಟ್ಟಿ , ವಿಶ್ವನಾಥ್ ಶೆಟ್ಟಿ ಕಡೆಕಾರ್ , ಮೆನೇಜರ್ ರವೀಂದ್ರ ಪುತ್ರನ್ , ತಾರಾನಾಥ್ ಮೇಸ್ತ , ಟ್ರಸ್ಟಿಗಳು ಆಡಳಿತ ಮಂಡಳಿಯ ಸದಸ್ಯರು , ಸೇವಾ ಸಮಿತಿಯ ಸದಸ್ಯರು ಉಪಸ್ಥರಿದ್ದರು , ಸಾವಿರಾರು ಭಕ್ತರೂ ಪೂಜೆಯಲ್ಲಿ ಪಾಲ್ಗೊಂಡು ಸೇವೆ ಸಲ್ಲಿಸಿದರು.

