ತನ್ನದಲ್ಲದ ತಪ್ಪಿಗೆ ಖಾತೆಯಿಂದ ಹಣ ಕಳಕೊಂಡು ಒದ್ದಾಡುತ್ತಿರುವ ಯೂನಿಯನ್ ಬ್ಯಾಂಕ್ ಖಾತೆದಾರರು

0
159

ಮೂಡುಬಿದಿರೆ ತಾಲೂಕು ಕರಿಂಜೆ ಗ್ರಾಮದ ಗಂಟಾಲ್ ಕಟ್ಟೆಯ ಧರ್ಮರಾಜ ಹೆಗಡೆಯವರ ಮಗ ವಿದ್ಯಾನಂದ ಹೆಗಡೆಯವರ ಅಲಂಕಾರ ಉಳಿತಾಯ ಖಾತೆಯಿಂದ ಏಪ್ರಿಲ್ ನಾಲ್ಕರಂದು ರಾತ್ರಿ ಬೆಳಗಾಗುವುದರೊಳಗೆ ಸುಮಾರು 14 ಲಕ್ಷ ರೂಪಾಯಿ ಹಣವನ್ನು ಮೋಸದಿಂದ ಅನಾಮಧೇಯ ವ್ಯಕ್ತಿಯು ಬೇರೆಯವರ ಖಾತೆಗೆ ವರ್ಗಾವಣೆಗೊಳಿಸಿರುತ್ತಾರೆ.

ಮೇಲ್ಕಂಡವರು ವಿ ಆರ್ ಎಲ್ ಸಂಸ್ಥೆಯ ಏಜೆಂಟಾಗಿ ಹಲವಾರು ವರ್ಷಗಳಿಂದ ಮೂಡುಬಿದಿರೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಹಣ ವರ್ಗಾವಣೆಯ ಬಗೆಗೆ ಯಾವುದೇ ಓಟಿಪಿ ಕೂಡ ಅವರ ಮೊಬೈಲಿಗೆ ಬಂದಿರುವುದಿಲ್ಲ. ಸೈಬರ್ ಮೋಸದ ಹಣ ವರ್ಗಾವಣೆಯಾಗಿದ್ದ ಬಗ್ಗೆ ಮರುದಿನ ಬೆಳಗ್ಗೆ ಖಾತೆಯಲ್ಲಿ ಹಣ ಇಲ್ಲದ ವಾಗಲೇ ಖಾತೆದಾರರಿಗೆ ಗೊತ್ತಾದುದು.
ಈ ಬಗ್ಗೆ ಏಪ್ರಿಲ್ ಆರರಂತೆ ಬ್ಯಾಂಕಿನ ಖಾತೆಯಲ್ಲಿ ದೂರನ್ನು ದಾಖಲಿಸಿದ್ದು, ಈತನಕವು ಬ್ಯಾಂಕಿನಿಂದ ಯಾವುದೇ ಉತ್ತರ ಲಭ್ಯವಾಗಿಲ್ಲ ಎಂದು ದೂರಿದ್ದಾರೆ.

ಖಾತೆದಾರರ ಒಪ್ಪಿಗೆ ರಹಿತವಾಗಿ ನಡೆದ ಸೈಬರ್ ಖಾತಾ ಮೋಸದ ಕುರಿತು ಈಗಾಗಲೇ ಪೊಲೀಸ್ ಹಣೆಯಲ್ಲಿ ಕೇಸ್ ಅನ್ನು ಕೂಡ ದಿನಾಂಕ 9.4 .26ರಂದು ದಾಖಲಿಸಲಾಗಿರುತ್ತದೆ.
ಎಲ್ಲಾ ಪ್ರಕ್ರಿಯೆಗಳು ನಡೆದು ಒಂದು ತಿಂಗಳು ಕಳೆದರು ಈತನಕ ಬ್ಯಾಂಕಿನಿಂದಾಗಲಿ, ಪೋಲಿಸು ಠಾಣೆಯಿಂದಾಗಲಿ ಯಾವುದೇ ಉತ್ತರ ಲಭ್ಯವಾಗಿರುವುದಿಲ್ಲ. ಈ ಮಧ್ಯೆ ಬ್ಯಾಂಕಿನ ಮುಖ್ಯ ಕಚೇರಿಗೂ, ಓಂಬುಟ್ಸಮನ್ ರವರಿಗೂ ತಿಳಿಸಲಾಗಿದ್ದರು ಕಳೆದುಕೊಂಡ 15.43 ಲಕ್ಷ ಹಣದ ಬಗ್ಗೆ ಈತನಕವು ಯಾವುದೇ ಉತ್ತರ ಬಂದಿರುವುದಿಲ್ಲ.

ಖಾತೆದಾರರಿಗೆ ಏನೊಂದೂ ತಿಳಿಯದೆ, ಅವರ ತಪ್ಪು ಇಲ್ಲದೆ ನಡೆದ ಮೋಸದ ಹಣ ವರ್ಗಾವಣೆಗೆ ಸಂಪೂರ್ಣವಾಗಿ ಬ್ಯಾಂಕು ಹೊಣೆಗಾರನಾಗಿದ್ದು ಸುರಕ್ಷತೆ ಇಲ್ಲದೆ ವರ್ಗಾವಣೆಯಾದ ಸಂಪೂರ್ಣ ಹಣದ ಜವಾಬ್ದಾರಿಯನ್ನು ಬ್ಯಾಂಕು ಹೊರಬೇಕಾಗಿದೆ. ಆದುದರಿಂದ ಹಣದ ಕೊರತೆಯಿಂದ ಒದ್ದಾಡುತ್ತಿರುವ ವ್ಯಾಪಾರಿ ವಿದ್ಯಾನಂದ ಹೆಗಡೆಯವರ ಖಾತೆಗೆ ಬ್ಯಾಂಕು ಸಂಪೂರ್ಣ ಹಣವನ್ನು ತಕ್ಷಣ ವರ್ಗಾಯಿಸಿ ಅವರಿಗಾಗುತ್ತಿರುವ ತೊಂದರೆಯನ್ನು ನಿವಾರಿಸಿ ನ್ಯಾಯವನ್ನು ಕೊಡಬೇಕಾಗಿದೆ.

LEAVE A REPLY

Please enter your comment!
Please enter your name here