ಶ್ರೀ ಮಾರಣಕಟ್ಟೆ ಮೇಳದ ಕಲಾವಿದರು ಹಾಗೂ ಅತಿಥಿ ಕಲಾವಿದರ ಕೂಡುವಿಕೆಯಿಂದ ನಡೆಯುವ ಪ್ರಸಂಗ
ಪುಣೆ : ಶ್ರೀ ಯಕ್ಷಿಣಿ ಬ್ರಹ್ಮಲಿಂಗೇಶ್ವರ ಸ್ವಾಮಿಯ ಪೂರ್ಣ ಅನುಗ್ರಹದೊಂದಿಗೆ ಶ್ರೀ ಮಾರಣಕಟ್ಟೆ ಮೇಳದ ಕಲಾವಿದರು ಹಾಗೂ ಅತಿಥಿ ಕಲಾವಿದರ ಕೂಡುವಿಕೆಯಿಂದ ಆಗಸ್ಟ್ 7 ರ ಶುಕ್ರವಾರ ಸಂಜೆ 4 ಗಂಟೆಗೆ ಅಮಾತ್ಯ ನಂದಿನಿ ಯಕ್ಷಗಾನ ಪುಣೆ ಪಿಂಪ್ರಿಯ ಆಚಾರ್ಯ ಅತ್ತೆ ರಂಗಮಂದಿರದಲ್ಲಿ ನಡೆಯಲಿದ್ದು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಯಕ್ಷಗಾನ ಪ್ರಸಂಗದ ಯಶಸ್ವಿಗೆ ಸಹಕಾರ ನೀಡಬೇಕಾಗಿ ಮೇಳದ ಮುಂಬೈ ಪ್ರಬಂಧಕರು ಪ್ರಭಾಕರ ಶೆಟ್ಟಿ ಮಡಾಮಕ್ಕಿ,ಮೇಳದ ಮುಂಬೈಯ ಮಹಾಪೋಷಕರು ರತ್ನಾಕರ ಶೆಟ್ಟಿ ಹೊಸೂರು, ಮೇಳದ ಮುಂಬೈ ಯಜಮಾನರು ಬೆಳ್ಳಾಲ ರಮೇಶ್ ಶೆಟ್ಟಿ ಸಿವಿಲ್ ಥಾಣಿ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

