ಮೂಡುಬಿದಿರೆ : ತಾಲೂಕಿನ ಬೆಳುವಾಯಿ ಸಮೀಪದ ಕೆಸರುಗದ್ದೆ ವಾಸಪ್ಪ ಹೋಟೆಲ್ ಮುಂಭಾಗದ ಕ್ರಾಸ್‌ನಲ್ಲಿ ಕಿಯಾ ಕಾರು ಹಾಗೂ ತೂಫಾನ್ ವಾಹನದ ನಡುವೆ ಅಪಘಾತ ಸಂಭವಿಸಿದೆ.

ಮೂಡುಬಿದಿರೆ ಕಡೆಗೆ ಸಾಗುತ್ತಿದ್ದ ಕಿಯಾ ಕಾರಿಗೆ, ಮೂಡುಬಿದಿರೆಯಿಂದ ಚಿಕ್ಕಮಗಳೂರು ಕಡೆಗೆ ತೆರಳುತ್ತಿದ್ದ ತೂಫಾನ್ ವಾಹನ ಡಿಕ್ಕಿ ಹೊಡೆದ ಪರಿಣಾಮ ಎರಡೂ ವಾಹನಗಳು ಜಖಂಗೊಂಡಿವೆ.
ಅಪಘಾತದ ತೀವ್ರತೆ ಇದ್ದರೂ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.

ಘಟನೆ ಕುರಿತು ಮಾಹಿತಿ ಪಡೆದ ಮೂಡುಬಿದಿರೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

