ಮೇ 27ರಂದು ಸಂಸದೀಯ ಸಮಿತಿಯು ಮಂಗಳೂರು ಮನಪಾ ವ್ಯಾಪ್ತಿಯ ಒಳಚರಂಡಿ ವ್ಯವಸ್ಥೆ-ಅವ್ಯವಸ್ತೆಯ ಸಮಗ್ರ ವೀಕ್ಷಣೆ
ಮನಪಾ ವ್ಯಾಪ್ತಿಯಲ್ಲಿ ಒಳಚರಂಡಿ ವ್ಯವಸ್ಥೆಯು 600ಕೋಟಿ ವೆಚ್ಚದಲ್ಲಿ ನರ‍್ಮಾಣಗೊಂಡಿದ್ದು, ಈ ಒಳಚರಂಡಿ ವ್ಯವಸ್ಥೆಯು ಅಸರ‍್ಪಕವಾಗಿ ನಡೆದಿದ್ದು, ಒಳಚರಂಡಿ ಕಾಮಗಾರಿಯಿಂದ ನಗರದ ಜನರಿಗೆ ಏನೂ ಪ್ರಯೋಜನವಾಗದೇ ಒಳಚರಂಡಿಯ ನೀರು ಮಳೆ ನೀರು ಹರಿಯುವ ತೋಡುಗಳಲ್ಲಿ ಹರಿದು ಸರ‍್ವಜನಿಕವಾಗಿ ಹರಿದು ಹೋಗಿ ಇದರಿಂದ ನಗರದ ಅನೇಕ ಜನರು ಅನಾರೋಗ್ಯ ಪೀಡಿತರಾಗಿದ್ದು, ಬಾವಿ ನೀರು ಕಲುಷಿತಗೊಂಡು ನಗರದ ವ್ಯವಸ್ಥೆಯೇ ಹಾಳಾಗಿರುವುದು ಈ ಬಗ್ಗೆ ಸಮಿತಿಯು ಕೈಗೊಂಡ ಕಾಮಗಾರಿಗಳನ್ನು ವೀಕ್ಷಿಸಿದ ಸಾ ರ‍್ವಜನಿಕ ಉದ್ದಿಮೆ ಸಮಿತಿಯನ್ನು ನೇಮಿಸಿ, 27ರಂದು ನಗರಕ್ಕೆ ಭೇಟಿ ನೀಡಿ ಕಲುಷಿತ ನೀರು ಹರಿಯುವ ಸ್ಥಳಗಳನ್ನು ಪರಿಶೀಲನೆ ಮಾಡಿ ಸ್ಥಳ ವೀಕ್ಷಣೆ ಮಾಡಲಿದ್ದಾರೆ.
ವಿಧಾನ ಪರಿಷತ್ ಶಾಸಕರು ಹಾಗೂ ಸರ‍್ವಜನಿಕ ಉದ್ದಿಮೆ ಸಮಿತಿಯ ಸದಸ್ಯರೂ ಆದ ಐವನ್ ಡಿʼಸೋಜಾರವರು ಇಂದು ಮಂಗಳೂರು ನಗರದ ತಮ್ಮ ಶಾಸಕರ ಕಛೇರಿಯಲ್ಲಿ ಒಳಚರಂಡಿ ಕಾಮಗಾರಿಗೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ವಿವರಗಳನ್ನು ಪಡೆದುಕೊಂಡು ಒಳಚರಂಡಿಯ ಅವ್ಯವಸ್ಥೆಯ ಬಗ್ಗೆ ಹಾಗೂ ನಗರಪಾಲಿಕೆಯ ತೊಂದರೆಗಳ ಬಗ್ಗೆ ವರದಿಯನ್ನು ನೀಡಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.
ಮನಪಾ ಅಧಿಕಾರಿಗಳ ಜೊತೆಯಲ್ಲಿ ನೀರು ಸರಬರಾಜು ಮತ್ತು ಒಳಚರಂಡಿ ಕುಂಡ್ಸೆಪ್ ಸಂಸ್ಥೆಯ ಜೊತೆ ಜಂಟಿ ಸಭೆಯನ್ನು ನಡೆಸಿ, ಮಂಗಳೂರಿನ ಸಮಗ್ರ ಒಳಚರಂಡಿ ಅವ್ಯವಸ್ಥೆಯ ಬಗ್ಗೆ ಸರಕಾರದ ಗಮನ ಸೆಳೆದು ಸರಕಾರದಿಂದ 1250ಕೋಟಿ ರೂಪಾಯಿಯ ಪ್ರಸ್ತಾವನೆಯನ್ನು ಅಂಗೀಕರಿಸಿ ಮಹಾನಗರ ಪಾಲಿಯ ವ್ಯಾಪ್ತಿಯಲ್ಲಿ ವಾಸಿಸುವ ಜನರಿಗೆ ಒಳಚರಂಡಿಯ ವ್ಯವಸ್ಥೆಯನ್ನು ಒದಗಿಸಿಕೊಡಲು ಅನೇಕ ರ‍್ಷಗಳ ಬೇಡಿಕೆಯನ್ನು ಈಡೇರಿಸಲು ಮಂಗಳೂರು ಮಹಾನಗರ ಪಾಲಿಕೆಯ ಎಂಜಿನಿಯರ್‌ಗಳಾದ ಶಿವಲಿಂಗಪ್ಪ, ನಾಗರಾಜ್ ಹಾಗೂ ರಾಜೇಶ್ ಇವರುಗಳ ಜೊತೆ ಚರ‍್ಚೆ ನಡೆಸಿದರು.
ಈ ಸಂದರ‍್ಭದಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ಮಾಜಿ ಮೇಯರ್‌ಗಳಾದ ಶಶಿಧರ ಹೆಗ್ಡೆ, ಭಾಸ್ಕರ್ ಮೊಯ್ಲಿ ಹಾಗೂ ಮಾಜಿ ಕರ‍್ಪೊರೇಟರ್‌ಗಳಾದ ಪ್ರವೀಣ್ ಚಂದ್ರ ಆಳ್ವ, ಅನಿಲ್ ಕುಮಾರ್ ಕೂಳೂರು, ಕೇಶವ ಮರೋಳಿ, ಶಂಶುದ್ದೀನ್ ಕುದ್ರೋಳಿ, ಲ್ಯಾನ್ಸ್ಲಾಟ್ ಪಿಂಟೋ, ಅಶ್ರಫ್ ಬಜಾಲ್, ಅಪ್ಪಿ ಲತಾ, ವಿಜಯ್ ಅಲ್ಫ್ರೆಡ್, ಭಾಸ್ಕರ್ ರಾವ್, ಚೇತನ್ ಕುಮಾರ್, ಹೇಮಂತ್ ಗರೋಡಿ, ಸತೀಶ್ ಪೆಂಗಲ್, ಪ್ರೇಮನಾಥ್ ಬಳ್ಳಾಳಬಾಗ್, ಪಕ್ಷದ ಮುಖಂಡರಾದ ಶಂಶುದ್ದೀನ್, ಜೇಮ್ಸ್ ಪ್ರವೀಣ್, ಇಮ್ರಾನ್ ಎ.ಆರ್., ವಿಕಾಶ್ ಶೆಟ್ಟಿ, ರಿತೇಶ್ ಅಂಚನ್, ಉಪೇಂದ್ರ ಮುಂತಾದವರು ಉಪಸ್ಥಿತರಿದ್ದರು.

