ಡಿ.ಎನ್. ಶಾಂಭವಿ ನಾಗರಾಜ್‌ರವರಿಗೆ “ಕರುನಾಡ ಕನ್ನಡ ಕಣ್ಮಣಿ” ರಾಜ್ಯ ಪ್ರಶಸ್ತಿಗೆ ಆಯ್ಕೆ

0
12

ದಾವಣಗೆರೆ : ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ವತಿಯಿಂದ ಪ್ರತೀ ವರ್ಷಧಂತೆ ಈ ವರ್ಷವೂ 71ನೇ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ದಾವಣಗೆರೆ ಜಿಲ್ಲೆಯ ಹರಿಹರದ ಪತ್ರಕರ್ತೆ ಡಿ.ಎನ್. ಶಾಂಭವಿ ನಾಗರಾಜ್‌ರವರಿಗೆ “ಕರುನಾಡ ಕನ್ನಡ ಕಣ್ಮಣಿ” ರಾಜ್ಯ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಕಲಾಕುಂಚ ಸಾಂಸ್ಕೃತಿಕ ಸಂಸ್ಥೆ ಅಧ್ಯಕ್ಷರಾದ ವಾಸುದೇವ ಲಕ್ಷö್ಮಣ್ ರಾಯ್ಕರ್ ತಿಳಿಸಿದ್ದಾರೆ.

ನಿರಂತರವಾಗಿ ಕಠಿಣ ಪರಿಶ್ರಮದಿಂದ ಒಬ್ಬ ಮಹಿಳೆ ಪತ್ರಿಕೋದ್ಯಮದಲ್ಲಿ ಮಾಡಿದ ಸಾಧನೆಗೆ ಈ ರಾಜ್ಯ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ ಶೆಣೈ ಪ್ರಕಟಿಸಿದ್ದಾರೆ.
ಯಾವುದೇ ನಿರೀಕ್ಷೆ, ಅಪೇಕ್ಷೆ ಇಲ್ಲದೇ ಕಲಾಕುಂಚದ ವರದಿಗಳನ್ನು ನಿರಂತರವಾಗಿ ‘ಲೋಕಪ್ರಭ” ದಿನಪತ್ರಿಕೆಯಲ್ಲಿ ಪ್ರಕಟಿಸಿದ ದಿನಪತ್ರಿಕೆಯ ಸಂಪಾದಕರಾದ ಡಿ.ಎನ್. ಶಾಂಭವಿ ನಾಗರಾಜ್‌ರವರಿಗೆ ಕಲಾಕುಂಚದ ಸರ್ವ ಸದಸ್ಯರು, ಪದಾಧಿಕಾರಿಗಳು ಇವರಿಗೆ ಅಭಿಮಾನದಿಂದ ಅಭಿನಂದಿಸಿ ಕಲಾಕುಂಚದ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಕೆ.ಸಿ.ಉಮೇಶ್ ಶುಭ ಹಾರೈಸಿದ್ದಾರೆ.

LEAVE A REPLY

Please enter your comment!
Please enter your name here