ಹಳೆಯಂಗಡಿಯಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಪ್ರಿಯದರ್ಶಿನಿ ಸಹಕಾರ ಸಂಘದ ಐದನೇ ವರ್ಷದ ಸಂಭ್ರಮಾಚರಣೆ ಹಳೆಯಂಗಡಿಯ ಹರಿ ಓಂ ಕಟ್ಟಡದ ಆವರಣದಲ್ಲಿ ಮೇ 20ರಂದು ನಡೆಯಲಿದೆ. ಹಳೆಯಂಗಡಿ, ಪಡುಬಿದ್ರೆ, ಕಿನ್ನಿಗೋಳಿ, ಹಾಗೂ ಮೂಡುಬಿದಿರೆಯಲ್ಲಿ ಶಾಖೆಯನ್ನು ಹೊಂದಿದೆ.
ಮೇ 20 ರಂದು ಬೆಳಗ್ಗಿಂದ ಮಧ್ಯಾಹ್ನದ ತನಕ ಉಚಿತ ವೈದ್ಯಕೀಯ ಶಿಬಿರ ನಡೆಯಲಿದೆ. ವಿವಿಧ ವಿಭಾಗದ ಅನುಭವಿ ತಜ್ಞ ವೈದ್ಯರುಗಳು ಹಾಜರಿದ್ದು ಸೂಕ್ತ ಚಿಕಿತ್ಸೆ ನೀಡಲಿದ್ದಾರೆ. ಅಗತ್ಯವಿದ್ದರೆ ಇಸಿಜಿ, ಶುಗರ್, ಬಿಪಿ, ಕಣ್ಣು, ಹಲ್ಲುಗಳ ತಪಾಸಣೆ ಲಭ್ಯವಿದೆ. ಸಂಜೆ ನೃತ್ಯ ಪ್ರದರ್ಶನ, ಸಭಾ ಕಾರ್ಯಕ್ರಮ, ಸಾಂಸ್ಕ್ರತಿಕ ಕಾರ್ಯಕ್ರಮಗಳು ನಡೆಯಲಿದೆ ಎಂದು ಸೊಸೈಟಿಯ ಅಧ್ಯಕ್ಷ ವಸಂತ್ ಬೆರ್ನಾರ್ಡ್ ಪತ್ರಿಕಾ ಮಾಹಿತಿ ನೀಡಿರುತ್ತಾರೆ.
ವರದಿ ರಾಯಿ ರಾಜ ಕುಮಾರ
.

