ಎಲ್.ಪಿ.ಜಿ ದರ ಏರಿಕೆಯಿಂದ ಪ್ರತೀ ದಿನ ಆಟೋ ರಿಕ್ಷಾ ಚಾಲಕರಿಗೆ 200 ರೂಪಾಯಿ ನಷ್ಟ ರಿಕ್ಷಾ ದರ ಪರಿಷ್ಕರಣೆ ಎಲ್.ಪಿ.ಜಿ ದರ ಏರಿಕೆಯಿಂದ ಕಾರ್ಮಿಕ ವರ್ಗಗಳಿಗೆ ತೊಂದರೆ : ಐವನ್ ಡಿʼಸೋಜಾ

0
6

ಮಂಗಳೂರು ಮಹಾನಗರ ಆಟೋ ರಿಕ್ಷಾಚಾಲಕರ 30ನೇ ವರ‍್ಷಿಕೋತ್ಸವದ ಸಭೆಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ವಿಧಾನ ಪರಿಷತ್ ಶಾಸಕರಾದ ಐವನ್ ಡಿʼಸೋಜಾರವರು ದಿನವೊಂದಕ್ಕೆ 5ಲೀಟರ್ ಎಲ್.ಪಿ.ಜಿಯನ್ನು ಹಾಕಿ ಬಾಡಿಗೆ ಮಾಡುತ್ತಿರುವ ರಿಕ್ಷಾ ಚಾಲಕರು ಐPಉದರ ಏರಿಕೆಯಿಂದ 200/-ರೂಪಾಯಿ ನಷ್ಟವನ್ನು ಅನುಭವಿಸುತ್ತಿದ್ದಾರೆ. ನಗರದಲ್ಲಿ ಸುಮಾರು 4,000 ಆಟೋ ರಿಕ್ಷಾ ಚಾಲಕರು ದೈನಂದಿನ ಬದುಕಿಗಾಗಿ ಆಟೋ ವಾಲನೆ ಮಾಡಿ ಬಾಡಿಗೆಗಾಗಿ ಹೋರಾಟ ನಡೆಸುತ್ತಿರುವ ಸಂರ‍್ಭದಲ್ಲಿ ದಿನವೊಂದಕ್ಕೆ 200ರೂಪಾಯಿ ಕಳೆದುಕೊಂಡು ತೊಂದರೆಯನ್ನು ಅನುಭವಿಸುತ್ತಿದ್ದಾರೆ.

ಆಟೋರಿಕ್ಷಾಚಾಲಕರ ವರ‍್ಪಿಕ ಮಹಾಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ ತೈಲಬೆಲೆ ಏರಿಕೆಯಿಂದ ದುಡಿಯುವ ರ‍್ಗಗಳಿಗೆ ತೊಂದರೆಯಾಗಿರುತ್ತದೆ. ಈ ಬಗ್ಗೆ ಕೇಂದ್ರ ರ‍್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ತಿಳಿಸಿದರು. ಕರ‍್ಮಿಕ ರ‍್ಗಗಳು ಕಷ್ಟ-ನಷ್ಟ ಅನುಭವಿಸಿಕೊಂಡು ಬರುತ್ತಿದ್ದಾರೆ ಈ ಅಸಂಘಟಿತ ಕರ‍್ಮಿಕ ರ‍್ಗಗಳಿಗೆ ಸರಕಾರ ಬಲ ತುಂಬಬೇಕಾಗಿದೆ. ಈ ದೃಷ್ಟಿಯಲ್ಲಿ ನೊಂದಾಯಿತ ಕಟ್ಟಡ ಕರ‍್ಮಿಕರಿಗೆ 60ವಯಸ್ಸಿನ ನಂತರ ನಿವೃತ್ತ ವೇತನ ಕನಿಷ್ಠ 3000/- ನೀಡುವಂತೆ ಕೇಂದ್ರ ಸರ‍್ಕಾರಕ್ಕೆ ಒತ್ತಾಯಿಸುವುದಾಗಿ ಐವನ್ ಡಿʼಸೋಜಾ ತಿಳಿಸಿದರು. ಈ ಸಂರ‍್ಭದಲ್ಲಿ ರಿಕ್ಷಾ ಚಾಲಕರ ಸವಲತ್ತುಗಳನ್ನು ವಿತರಿಸಲಾಯಿತು.

ಸಂಘದ ಸದಸ್ಯರಾದ ಶೇಖರ್ ದೇರಳಕಟ್ಟೆ, ವಸಂತ ಶೆಟ್ಟಿ ವೀರನಗರ, ಅನಿಲ್ ಜೆರಾಲ್ ಲೋಬೋ, ಸೀತಾರಾಮ ಶೆಟ್ಟಿ ಹಾಗೂ ವಿಲ್ಫಿ ರವರು ಸೇರಿದಂತೆ ಸಂಘದ ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here