ಮಂಗಳೂರು (ಮೂಡುಬಿದಿರೆ) : ಮೇ.17 ನಾದ ಧ್ಯಾನ ಚಕ್ರ (ಯಜ್ಞ)- 8

0
29

ಮೂಡುಬಿದಿರೆ : ಪಿರಮಿಡ್ ವರ್ಲ್ಡ್‌ ಫೌಂಡೇಶನ್‌ ಬೆಂಗಳೂರು ಹಾಗೂ ಅಳ್ವಾಸ್ ಫೌಂಡೇಶನ್ ಸಹಯೋಗದಲ್ಲಿ “ಮಂಗಳೂರು (ಮೂಡುಬಿದಿರೆ) ನಾದ ಧ್ಯಾನ ಚಕ್ರ (ಯಜ್ಞ)-8” ಕಾರ್ಯಕ್ರಮವನ್ನು ಮೇ 17ರಂದು ಭಾನುವಾರ ಬೆಳಿಗ್ಗೆ 7ರಿಂದ ಮಧ್ಯಾಹ್ನ 2ರವರೆಗೆ ಮೂಡುಬಿದಿರೆಯ ಕೃಷಿ ಶಿರಿ ಹಾಲ್, ಅಳ್ವಾಸ್ ಕ್ಯಾಂಪಸ್‌ ಮೂಡುಬಿದಿರೆಯಲ್ಲಿ ಆಯೋಜಿಸಲಾಗಿದೆ.

ಖ್ಯಾತ ಧ್ಯಾನ ತರಬೇತುದಾರರಾದ ಡಾ. ಅಯ್ಯಪ್ಪ ಪಿಂಡಿ ಅವರು ಕಾರ್ಯಕ್ರಮವನ್ನು ನಡೆಸಿಕೊಡಲಿದ್ದು, ಧ್ಯಾನ, ಜ್ಞಾನ, ಸಂಸ್ಕೃತಿ ಹಾಗೂ ಆಧ್ಯಾತ್ಮಿಕ ವಿಚಾರಗಳ ಕುರಿತು ವಿಶೇಷ ಉಪನ್ಯಾಸ ನೀಡಲಿದ್ದಾರೆ.

ಬೆಳಿಗ್ಗೆ 8:30ಕ್ಕೆ ಭವ್ಯ ಉದ್ಘಾಟನೆ ನಡೆಯಲಿದ್ದು, ಬೆಳಿಗ್ಗೆ 9ರಿಂದ ಮಧ್ಯಾಹ್ನ 2ರವರೆಗೆ ಮೂರು ಗಂಟೆಗಳ ಕಾಲ ನಾದ ಧ್ಯಾನ, ಭಾಷಣ, ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ನಂತರ ಉಚಿತ ಭೋಜನ ವ್ಯವಸ್ಥೆ ಇರಲಿದೆ.

ಧ್ಯಾನ ಮಾಡುವ ವಿಧಾನ

* ಧ್ಯಾನ ಮಾಡುವ ವೇಳೆ ಕೈ ಬೆರಳುಗಳನ್ನು ಒಂದಕ್ಕೊಂದು ಪೋಣಿಸಿ ನಿಧಾನವಾಗಿ ಹಿಡಿದುಕೊಳ್ಳಬೇಕು

* ಕಾಲುಗಳನ್ನು ಅಡ್ಡ ಹಾಕಿ (Cross your feet) ಕಣ್ಣುಗಳನ್ನು ಮೃದುವಾಗಿ ಮುಚ್ಚಬೇಕು.

* ಸಹಜವಾದ ಉಸಿರಾಟವನ್ನು ಯಾವುದೇ ಬದಲಾವಣೆ ಮಾಡದೆ ಗಮನಿಸುವ ಮೂಲಕ ಧ್ಯಾನದಲ್ಲಿ ತೊಡಗಿಸಿಕೊಳ್ಳಬೇಕು.

ಧ್ಯಾನದ ಪ್ರಯೋಜನಗಳು

* ಗಾಢವಾದ ಆಂತರಿಕ ಶಾಂತಿ ಹಾಗೂ ಮಾನಸಿಕ ಸ್ಪಷ್ಟತೆ

* ಒತ್ತಡದಿಂದ ಮುಕ್ತಿ ಮತ್ತು ಆರೋಗ್ಯ ಸುಧಾರಣೆ

* ಉನ್ನತ ಪ್ರಜ್ಞೆಯ ಸ್ಥಿತಿಗೆ ಕ್ರಮೇಣ ಜಾಗೃತಿ

ಧ್ಯಾನ ಕೇಂದ್ರ: ಆದಿಶಂಕರಾಚಾರ್ಯ ಹೀಲಿಂಗ್ ಪಿರಮಿಡ್ ಧ್ಯಾನ ಕೇಂದ್ರ, ಸಂಪಿಗೆ (ಮೂಡುಬಿದಿರೆ). ಹೆಚ್ಚಿನ ಮಾಹಿತಿಗಾಗಿ: +91 96112 68941 ಸಂಪರ್ಕಿಸಬಹುದು.

Pyramid World Foundation
Current Account
A/C No. : 50200073217360
HDFC Bank
IFSC : HDFC0002850

Google Pay | PhonePe | PayTm : +91 80509 25330

ಪಿರಮಿಡ್ ವರ್ಲ್ಡ್ ಫೌಂಡೇಶನ್ (R) ವತಿಯಿಂದ ಕಾರ್ಯಕ್ರಮ ಆಯೋಜಿಸಲಾಗಿದ್ದು, ದೇಣಿಗೆಗಳನ್ನು ಸ್ವೀಕರಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here