ಕಾರ್ಕಳ, ಶ್ರೀ ಮಾರಿಯಮ್ಮ ದೇವಸ್ಥಾನದ ವರ್ಷಂಪ್ರತಿ ನಡೆಯುವ ಜಾತ್ರಾ ಮಹೋತ್ಸವ ಮಾರಿ ಪೂಜೆ ಉತ್ಸವ ಬುಧವಾರ ಸಂಜೆ ಸಂಪನ್ನ ಗೊಂಡಿತು.

ಸಹಸ್ರಾರು ಸಂಖ್ಯೆಯಲ್ಲಿ ಭಕ್ತಾಧಿಗಳು ಶ್ರೀ ದೇವಿಯ ಪ್ರಸಾದ ಸ್ವೀಕರಿಸಿದರು ಧಾರ್ಮಿಕ ವಿಧಿ ವಿಧಾನಗಳು, ಶ್ರೀ ದೇವಿಯ ದರ್ಶನ ಸೇವೆ ನಂತರ ಮಾರಿಯಮ್ಮ ದೇವಿಯ ವಿಗ್ರಹ ವಿಸರ್ಜನಾ ಪೂಜೆ ನಂತರ ಶ್ರೀ ದೇವಿಯನ್ನು ಮೆರವಣಿಯ ಮೂಲಕ ಕಾಡಿನಲ್ಲಿ ವಿಸರ್ಜಿಸುವ ಮೂಲಕ ಕಾಲಾವಧಿ ಮಾರಿ ಪೂಜೆ ಸಂಪನ್ನ ಗೊಂಡಿತು.
ಮಾದ್ಯಮದೊಂದಿಗೆ ಮಾತನಾಡಿದ ಕಾರ್ಕಳ ಕಾಂಗ್ರೆಸ್ ಮುಖಂಡ ಮುನಿಯಾಲು ಉದಯ್ ಕುಮಾರ್ ಶೆಟ್ಟಿ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು.

