ವಿಧಾನಪರಿಷತ್ ಶಾಸಕರಾದ ಶ್ರೀ ಐವನ್ ಡಿʼಸೋಜಾ ನೇತೃತ್ವದಲ್ಲಿ ದ.ಕ. ಜಿಲ್ಲೆಯ ಅಬಕಾರಿ ಇಲಾಖೆಯಿಂದ ಆಗುತ್ತಿರುವ ಸಮಸ್ಯೆಗಳು, ಜನ ಸಾಮಾನ್ಯರಿಗೆ ಇಲಾಖೆಯಿಂದ ಆಗುತ್ತಿರುವ ತೊಂದರೆಗಳ ಬಗ್ಗೆ ಸಭೆ ನಡೆಸಲಾಗಿ ಅಬಕಾರಿ ಇಲಾಖೆಯು ತರಲು ಉದ್ದೇಶಿಸಿರುವ ಹೊಸ ಕಾನೂನಿನಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಮದ್ಯಪಾನವನ್ನು ಮಾಡುತ್ತಿರುವುದಾಗಿ ಸಂಬಂಧಿಸಿ ಅಹಿತಕರ ಘಟನೆಗಳಿಗೆ ಸೂಕ್ತ ಬದಲಾವಣೆ ತರಲು ರಾಜ್ಯದ ಮುಖ್ಯಮಂತ್ರಿ ಹಾಗೂ ಅಬಕಾರಿ ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲು ತೀರ್ಮಾನಿಸಲಾಯಿತು.
ಮನೆಗಳಲ್ಲಿ ಕಾರ್ಯಕ್ರಮ ನಡೆಸುತ್ತಿರುವ ಸಂದರ್ಭದಲ್ಲಿ ಅಬಕಾರಿ ಇಲಾಖೆಯಿಂದ ಅಗುತ್ತಿರುವ ತೊಂದರೆಗಳ ಬಗ್ಗೆ ಅನುಮತಿಯ ಅವಶ್ಯಕತೆ, ಮದ್ಯ ವಿತರಿಸಲು ಇರುವ ತೊಂದರೆಗಳ ಬಗ್ಗೆ ಅಧಿಕಾರಿಗಳ ಗಮನಕ್ಕೆ ತರಲಾಯಿತು. ಮತ್ತು ಪರವಾನಿಗೆ ಪಡೆಯುತ್ತಿರುವ ಸಂದರ್ಭಸಲ್ಲಿ ಇರುವ ಅಡೆತಡೆಗಳ ಬಗ್ಗೆ ಸರಕಾರ ತಿಳಿಸಲು ತೀರ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಕ್ಯಾಟರಿಂಗ್ ನಡೆಸುತ್ತಿರವ ಸಂಘದ ಸದಸ್ಯರುರುಗಳು ವಿವಿಧ ಸಂಘಟನೆಯ ಪದಾಧಿಕಾರಿಗಳು ತಮ್ಮ ಅನಿಸಿಕೆ ವ್ಯಕ್ತಪಡಿಸಿ ವಿನಾ ಕಾರಣ ಕಾರ್ಯಕ್ರಮಗಳಿಗೆ ತೊಂದರೆ ನೀಡುವುದನ್ನು ನಿವಾರಿಸಲು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಅಬಕಾರಿ ಇಲಾಖೆಯ ಡೆಪ್ಯೂಟಿ ಕಮಿಷನರ್ ಬಿಂದುಶ್ರೀ ಹಾಗೂ ಮಂಗಳೂರು ಅಬಕಾರಿ ಇಲಾಖೆಯ ಎಲ್ಲಾ ವಿಭಾಗೀಯ ಅಬಕಾರಿ ಅಧಿಕಾರಿಗಳು, ಕ್ಯಾಥೊಲಿಕ್ ಸಭಾ ಅಧ್ಯಕ್ಷರಾದ ಸಂತೋಷ್ ಡಿʼಸೋಜಾ, ಮಾಜಿ ಅಧ್ಯಕ್ಷ ಸ್ಟ್ಯಾನಿ ಲೋಬೋ ಪ್ರಚಾರ ಸಮಿತಿಯ ಅಧ್ಯಕ್ಷರಾದ ಮಾರ್ಸೆಲ್ ಮೊಂತೆರೋ, ರಚನಾ ಅಧ್ಯಕ್ಷರಾದ ರಾಯ್ ಕ್ಯಾಸ್ತಲಿನೋ, ಕೊಂಕಣಿ ಅಕಾಡೆಮಿ ಅಧ್ಯಕ್ಷರಾದ ಸ್ಟ್ಯಾನಿ ಅಲ್ವಾರಿಸ್, ಕಾರ್ಪೋರೇಟರ್ ನವೀನ್ ಡಿʼಸೋಜಾ, ಮಾಂಡ್ ಸೋಬಾಣ್ ಅಧ್ಯಕ್ಷರಾದ ಲೂಯಿಸ್ ಪಿಂಟೋ, ವಿಲೇಜ್ ರೆಸ್ಟೋರೆಂಟ್ ಜೊಸ್ಸಿ ಡಿʼಸೋಜಾ, CASK ಮಾಜಿ ಅಧ್ಯಕ್ಷರಾದ ಟೆಕ್ಸೆರಾ ಹಾಗೂ ವಿವಿಧ ಸಭಾಂಗಣಗಳ ಮಾಲಕರುಗಳಾದ ಸುಪ್ರೀತ್ ರೈ, ರಾಜೇಶ್, ವಿವಿಧ ಹಾಲ್‌ಗಳ ಮ್ಯಾನೇಜರ್‌ಗಳು ಉಪಸ್ಥಿತರಿದ್ದರು.

