ಕುಂದಾಪುರ:ಸ್ಪರ್ಧಾ ಸಾರಥಿ ಕೆಎಎಸ್ ಅಕಾಡೆಮಿ, ಕುಂದಾಪುರದಲ್ಲಿ ಶಂಕರನಾರಾಯಣ ಠಾಣೆಯ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಅಕ್ಷಯಾ ಕುಮಾರಿಯವರು ‘From Student to Officer-Competitive Exam Guidence’ ವಿಷಯದ ಮೇಲೆ ವಿದ್ಯಾರ್ಥಿಗಳಿಗೆ ವಿಶೇಷ ಮಾರ್ಗದರ್ಶನ ಮಾಡಿದರು. ”ಸರ್ಕಾರಿ ಹುದ್ದೆ ಮೌಲ್ಯಯುತವಾದದ್ದು. ನಿರಂತರ ಪ್ರಯತ್ನ, ಶಿಸ್ತು ರೂಢಿಸಿಕೊಂಡವರಿಗಷ್ಟೆ ದಕ್ಕುತ್ತದೆ” ಎಂದರು. ಸಂಸ್ಥೆಯ ಸಂಸ್ಥಾಪಕರಾದ ಆದರ್ಶ ಕೆಲ ಉಪಸ್ಥಿತರಿದ್ದರು.

