ಕಡಿಯಾಳಿಯಲ್ಲಿ ಕೆಸರ್ದ ಗೊಬ್ಬು ಕ್ರೀಡಾಕೂಟ ಸಂಪನ್ನ

0
46


ಉಡುಪಿ: ಕಡಿಯಾಳಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ 60ನೇ ವರ್ಷದ ಗಣೇಶೋತ್ಸವದ ಪ್ರಯುಕ್ತ ಸಗ್ರಿ ಶ್ರೀ ವಾಸುಕಿ ಸುಬ್ರಹ್ಮಣ್ಯ ದೇವಸ್ಥಾನದ ಹತ್ತಿರದ ಗದ್ದೆಯಲ್ಲಿ ಕೆಸರ್ದ ಗೊಬ್ಬು ಕ್ರೀಡಾಕೂಟ ಭಾನುವಾರ ನೆರವೇರಿತು.
ಉದ್ಘಾಟನೆ
ಪ್ರಾಂತ ಗೋರಕ್ಷ ಪ್ರಮುಖ್ (ಕರ್ನಾಟಕ ದಕ್ಷಿಣ) ಸುನಿಲ್ ಕೆ.ಆರ್. ಕ್ರೀಡಾಕೂಟ ಉದ್ಘಾಟಿಸಿದರು. ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವಿಜಯ ರಾಘವ ರಾವ್, ಮಾಜಿ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಶ್ಯಾಮಲಾ ಕುಂದರ್ ಹಾಗೂ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವಜ್ರಮಹೋತ್ಸವ ಸಮಿತಿ ಅಧ್ಯಕ್ಷ ಡಾ. ಕಟ್ಟೆ ರವಿರಾಜ್ ಆಚಾರ್ಯ, ಪ್ರಧಾನ ಕಾರ್ಯದರ್ಶಿ ಕೆ. ರಾಘವೇಂದ್ರ ಕಿಣಿ ಮೊದಲಾದವರು ಉಪಸ್ಥಿತರಿದ್ದರು.
ಸಗ್ರಿಯ ಕೆಸರು ಗದ್ದೆಯಲ್ಲಿ ಬಾಲಕರಿಂದ ಹಿಡಿದು ವಯೋ ವೃದ್ಧರ ತನಕ ವಿವಿಧ ವಿಭಾಗಗಳಲ್ಲಿ ಹಲವಾರು ಆಟೋಟ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಕ್ರೀಡಾಪಟುಗಳ ಉತ್ಸಾಹ ಹೆಚ್ಚಿಸಲು ಸಂಗೀತದ ರಿದಂಗೆ ತಕ್ಕಂತೆ ‘ರೈನ್ ಡಾನ್ಸ್’ (ಮಳೆ ನೃತ್ಯ) ನಡೆಸಲಾಯಿತು. ಜಿಲ್ಲೆಯ ಶ್ರೇಷ್ಠ ಹಗ್ಗ ಜಗ್ಗಾಟ ತಂಡಗಳು ಭಾಗವಹಿಸಿದ್ದವು. ತುಳುನಾಡ ಸ್ವರ ತುಡರ್’ ಸಚೇಂದ್ರ ಅಂಬಾಗಿಲು ಮತ್ತು ಚಿಯರ್ ಬಾಯ್ ಚೇತು ವಿಶಿಷ್ಟ ನಿರೂಪಣೆ ಗಮನಸೆಳೆಯಿತು.