ಕರೆಗೆ ಸ್ಪಂದನೆ ಇಲ್ಲ ಯಾವ ಸಮಸ್ಯೆಯೂ ಸಮಯಕ್ಕೆ ಸರಿಯಾಗಿ ನಿವಾರಣೆ ಆಗುತ್ತಿಲ್ಲ
ಮೂಡುಬಿದಿರೆ : ಮಳೆಗಾಲ ಸಮೀಪಿಸುತ್ತಿದ್ದು ಮೂಡುಬಿದಿರೆಯ ಜನತೆಗೆ ಕತ್ತಲೆಯ ವನವಾಸ ಎದುರಾಗಿದೆ. ಮೆಸ್ಕಾಂ ಅಧಿಕಾರಿಗಳು ಯಾವುದೇ ವಿಧವಾಗಿ ಸ್ಪಂದಿಸುತ್ತಿಲ್ಲವೆಂದು ಸಾರ್ವಜನಿಕ ವಲಯದಲ್ಲಿ ದೂರುಗಳು ಕೇಳಿಬರುತ್ತಿದೆ. ವ್ಯವಸ್ಥಿತವಾದ ದುರಸ್ತಿ ಕಾರ್ಯಗಳು ನಡೆಯದ ಕಾರಣ ಮೂಡುಬಿದಿರೆ ಜನತೆಗೆ ಜೀವನವು ಹೈರಾಣವಾಗಿದೆ.
ವ್ಯವಹಾರಸ್ಥರಿಗೆ ದಿನದಲ್ಲಿ ತಮ್ಮ ಕೆಲಸಗಳನ್ನು ನಡೆಸಲು ಬೇಕಾದ ಸಮರ್ಪಕ ವಿದ್ಯುತ್ ಪೂರೈಕೆ ಆಗುತ್ತಿಲ್ಲ. ಕೇಳಿದರೆ ಲೈನ್ fault ಎಂದು ಲೈನ್ಮಂಗಳು ಹೇಳುತ್ತಿದ್ದಾರೆ. ರಾತ್ರಿ ಬಂದು ಮಲಗಿದರೆ ವಿಧ್ಯುತ್ ವ್ಯತಾಯ್ದಿಂದ ನಿದ್ರೆಯೂ ಮಾಡಲಾಗುತ್ತಿಲ್ಲ . ಆದರೆ SO ಮಾತ್ರ ಯಾರ ಕರೆಯನ್ನು ಉತ್ತರಿಸದೆ ಸುಮ್ಮನೆ ಕೂತಿರುವುದು ಜನರ ಕೋಪಕ್ಕೆ ಕಾರಣವಾಗಿದೆ. ಮೆಸ್ಕಾಂ na landlines phone pic ಮಾಡುವವರು ಇಲ್ಲದೆ ಸಮಸ್ಯೆಗಳನ್ನು ತಿಳಿಸಲು ಹೈರಾಣ ಆಗಿದೆ.
ಸಹಾಯವಾಣಿ ಸಂಖ್ಯೆಗೆ ದೂರು ನೀಡಿದರೂ ಸಮರ್ಪಕ ಸಮಯದಲ್ಲಿ ಸಮಸ್ಯೆ ಬಗೆಹರಿಯುತಿಲ್ಲ.
