ಕೊರಗಜ್ಜನಿಗೆ ಕೋಲ ಸೇವೆ ಸಲ್ಲಿಸಿದ ನಟಿ ರಚಿತಾ ರಾಮ್

0
1

ನಟಿ ರಚಿತಾ ರಾಮ್  ಅವರು ಚಿತ್ರರಂಗಕ್ಕೆ ಕಾಲಿಟ್ಟು 14 ವರ್ಷಗಳು ಕಳೆದಿವೆ. ಈಗಲೂ ಅವರಿಗೆ ಅಷ್ಟೇ ಬೇಡಿಕೆ ಇದೆ. ಕನ್ನಡ ಮಾತ್ರವಲ್ಲದೇ ಪರಭಾಷೆಯ ಚಿತ್ರರಂಗದಿಂದಲೂ ಅವರಿಗೆ ಅವಕಾಶಗಳು ಬರುತ್ತಿವೆ. ರಚಿತಾ ಅವರು ದೈವ ಭಕ್ತೆ ಕೂಡ ಹೌದು. ಈಗ ಅವರು ಕೊರಗಜ್ಜ ದೈವದ ಕೋಲ ಸೇವೆಯಲ್ಲಿ ಭಾಗಿಯಾಗಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಬೆಂಜನಪದವಿನ ಕೊರಗಜ್ಜ  ಸನ್ನಿಧಿಯಲ್ಲಿ ರಚಿತಾ ರಾಮ್ ಅವರು ಕೋಲ ಸೇವೆ ನೀಡಿದ್ದಾರೆ. ಕುಟುಂಬ ಸಮೇತರಾಗಿ ಆಗಮಿಸಿ ಕೋಲ ಸೇವೆಯಲ್ಲಿ ಭಾಗಿಯಾದ ರಚಿತಾ ರಾಮ್ ಅವರ ವಿಡಿಯೋ ಲಭ್ಯವಾಗಿದೆ. ಧ್ರುವ ಸರ್ಜಾ ಜೊತೆ ‘ಕ್ರಿಮಿನಲ್’ ಹಾಗೂ ಸತೀಶ್ ನೀನಾಸಂ ಜೊತೆ ‘ಅಯೋಗ್ಯ 2’ ಸಿನಿಮಾಗಳಲ್ಲಿ ರಚಿತಾ ರಾಮ್ ಅವರು ಬ್ಯುಸಿ ಆಗಿದ್ದಾರೆ.

LEAVE A REPLY

Please enter your comment!
Please enter your name here